ನೀವು ಚಿಕ್ಕ ವಯಸ್ಸಿನಿಂದಲೂ ಬ್ಲೇಡ್ ನೋಡಿರುತ್ತೀರಾ ಅಲ್ವಾ!ಶೇವಿಂಗ್, ಟ್ರೀಮಿಂಗ್ ಮಾಡುವುದರಿಂದ ಹಿಡಿದು ಪೆನ್ಸಿಲ್ ಅನ್ನು ಹರಿತಗೊಳಿಸುವುದರವರೆಗೆ ಬ್ಲೇಡ್ ಬೇಕು. ಆದ್ರೆ ಯಾವತ್ತಾದ್ರೂ ಯೋಚ್ನೆ ಮಾಡಿದ್ದೀರಾ ಎಲ್ಲ ಬ್ಲೇಡ್‌ಗಳಲ್ಲೂ ಒಂದೇ ಡಿಸೈನ್ ಯಾಕಿರುತ್ತೆಅಂತ? ಇಲ್ಲಾಂದ್ರೆ ಇವತ್ತು ಹೇಳ್ತಿವಿ ನೋಡಿ.
1901 ರಲ್ಲಿ, ವಿಶ್ವ-ಪ್ರಸಿದ್ಧ ಬ್ಲೇಡ್ ತಯಾರಕ ಜಿಲೆಟ್ ಯುನೈಟೆಡ್ ಸ್ಟೇಟ್ಸ್‌ನಲ್ಲಿಕ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. 1904 ರಲ್ಲಿ ಅವರು ‘ಕಿಂಗ್ ಕ್ಯಾಂಪ್’ ಬ್ಲೇಡ್ ಅನ್ನು ಪರಿಚಯಿಸಿದರು. ಕಿಂಗ್ ಕ್ಯಾಂಪ್ ಜಿಲೆಟ್ ವಾಸ್ತವವಾಗಿ ಕಂಪನಿಯ ಸ್ಥಾಪಕ. ಅವರ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಲಾಯಿತು.
116-117 ವರ್ಷಗಳ ಹಿಂದೆ ಬ್ಲೇಡ್ ಅನ್ನು ರೇಜರ್ ಹ್ಯಾಂಡಲ್‌ಗೆ ಜೋಡಿಸಲು ಸ್ಕ್ರೂಗಳು ಅಥವಾ ನಟ್-ಬೋಲ್ಟ್‌ಗಳನ್ನು ಬಳಸಲಾಗುತ್ತಿತ್ತು. ಅದಕ್ಕಾಗಿಯೇ ಜಿಲೆಟ್ ಬ್ಲೇಡ್ ಮಧ್ಯದಲ್ಲಿ ಒಂದು ಅಂತರವನ್ನು ಬಿಟ್ಟಿದೆ. ನಂತರ ಆ ವಿನ್ಯಾಸ ಜನಪ್ರಿಯವಾಯಿತು.
ಶೇವಿಂಗ್ ಬ್ಲೇಡ್ ನ ವಿನ್ಯಾಸ, ಗಾತ್ರ ಗ್ರಾಹಕರಿಗೆ ಅರ್ಥವಾಗಿತ್ತು. ಆದ್ದರಿಂದಲೇ ಬೇರೆ ಬ್ಲೇಡ್ ತಯಾರಕರು ಮಾರುಕಟ್ಟೆಗೆ ಬಂದರೂ ಯಾರೂ ಜಿಲೆಟ್ ವಿನ್ಯಾಸವನ್ನು ಬದಲಾಯಿಸಿಲ್ಲ. ಈಗಲೂ ಸಹ ಅದೇ ವಿನ್ಯಾಸ ಮುಂದುವರಿದಿದೆ.