ಮೂರು ತಿಂಗಳ ಬಳಿಕ ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ತೆರವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರದಲ್ಲಿ ಸುಮಾರು ಮೂರು ತಿಂಗಳ ಬಳಿಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಕೆಲವು ಷರತ್ತುಗಳೊಂದಿಗೆ ರಾಜ್ಯ ಸರಕಾರ ಮಂಗಳವಾರ ಹಿಂಪಡೆದಿದೆ.

ಆದ್ರೆ ಮೊಬೈಲ್ ಇಂಟರ್ನೆಟ್ ಮೇಲಿನ ನಿಷೇಧ ಮುಂದುವರೆಯಲಿದೆ ಎಂದು ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಇಂಟರ್ ನೆಟ್ ಸಂಪರ್ಕವು ಸ್ಥಿರ IP ಮೂಲಕ ಮಾತ್ರ ಇರುತ್ತದೆ ಮತ್ತು ಇಲ್ಲಿ ಚಂದಾದಾರರು ಇತರೆ ಯಾವುದೇ ಹೊಸ ಸಂಪರ್ಕಕ್ಕೂ ಅನುಮತಿ ನೀಡಬಾರದು ಎಂಬ ಷರತ್ತು ವಿಧಿಸಲಾಗಿದೆ.

ಇಂಟರ್ ನೆಟ್ ನಿಷೇಧದಿಂದ ಮೊಬೈಲ್ ರೀಚಾರ್ಜ್, ಎಲ್ಪಿಜಿ ಸಿಲಿಂಡರ್ ಬುಕಿಂಗ್, ವಿದ್ಯುತ್ ಬಿಲ್ಗಳ ಪಾವತಿ ಮತ್ತು ಇತರ ಆನ್ಲೈನ್ ಸೇವೆಗಳಲ್ಲದೆ, ಕಚೇರಿಗಳು ಮತ್ತು ಸಂಸ್ಥೆಗಳು ಮತ್ತು ಮನೆಯಿಂದಲೇ ಕೆಲಸ ಮಾಡುವ ಜನರ ನೋವನ್ನು ಸರ್ಕಾರ ಅರಿತುಕೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!