Intra-Squad Match | ಭಾರತ ತಂಡದ ಸೀನಿಯರ್ ಬೌಲರ್​ಗಳನ್ನ ಬೆಂಡೆತ್ತಿದ ಶಾರ್ದೂಲ್: ಸ್ಫೋಟಕ ಶತಕ, ಬೌಲಿಂಗ್ ನಲ್ಲಿ ಗಮನ ಸೆಳೆದ ಆಲ್​ರೌಂಡರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಾಗುತ್ತಿರುವ ಭಾರತ ಕ್ರಿಕೆಟ್ ತಂಡದಲ್ಲಿ ಶಾರ್ದೂಲ್ ಠಾಕೂರ್ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಲಂಡನ್‌ನ ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಭಾರತ ಎ ನಡುವಿನ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಶಾರ್ದೂಲ್ ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಮೂರನೇ ದಿನದಂದು ಶಾರ್ದೂಲ್ ಭಾರತ ಎ ತಂಡದ ಪರ ಬ್ಯಾಟಿಂಗ್ ಮಾಡುವಾಗ 122 ರನ್ ಗಳಿಸಿದ ಅಜೇಯ ಶತಕದಿಂದ ತಮ್ಮ ಬಲಿಷ್ಠ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಷ್‌ದೀಪ್ ಸಿಂಗ್ ರಂತಹ ಭಾರತದ ಶ್ರೇಷ್ಠ ವೇಗಿ ಬೌಲರ್‌ಗಳ ಎದುರು ಈ ಶತಕ ಬಾರಿಸಿರುವುದು ಅವರ ಇನಿಂಗ್ಸ್‌ನ್ನು ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಶಾರ್ದೂಲ್ ಮಿಂಚಿದ್ದಾರೆ. ಎರಡನೇ ದಿನದಂದು ಅವರು ಬೌಲಿಂಗ್ ಮಾಡುತ್ತಾ ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಕರುಣ್ ನಾಯರ್‌ರಂತಹ ಟಾಪ್ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆದರು.

ಈ ಹಿನ್ನೆಲೆಯಲ್ಲಿ ಶಾರ್ದೂಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ನಡುವೆ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ತಂಡದ ಆಲ್‌ರೌಂಡರ್ ಸ್ಥಾನಕ್ಕೆ ತೀವ್ರ ಪೈಪೋಟಿಯಿದೆ. ನಿತೀಶ್ ಬಾಟ್‌ನಲ್ಲಿ ಶತಕ ಗಳಿಸಿದರೂ, ಬೌಲಿಂಗ್‌ನಲ್ಲಿ ನಿರಾಶೆ ಮೂಡಿಸಿದ್ದು ಮ್ಯಾನೇಜ್‌ಮೆಂಟ್‌ಗೆ ಆಯ್ಕೆಯಲ್ಲಿ ಗೊಂದಲ ತಂದಿದೆ. ಶಾರ್ದೂಲ್ ತಮ್ಮ ಇತ್ತೀಚಿನ ಫಾರ್ಮ್ ಮತ್ತು ಇಂಗ್ಲೆಂಡ್‌ನ ಸ್ಥಿತಿಗತಿಯೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯದಿಂದ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಶಾರ್ದೂಲ್ ಠಾಕೂರ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮುಂಬರುವ ಟೆಸ್ಟ್ ಸರಣಿಗೆ ತಾವು ಸಂಪೂರ್ಣ ಸಜ್ಜಾಗಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!