November 17, 2026
Tuesday, November 17, 2026
spot_img

ಸೌಜನ್ಯಾ ಅತ್ಯಾಚಾ*ರ, ಕೊ*ಲೆ ಪ್ರಕರಣ ತನಿಖೆ ಮತ್ತಷ್ಟು ಚುರುಕು: ಶವ ಪತ್ತೆಯಾದ ಸ್ಥಳದಲ್ಲಿ ಎಫ್‌ಎಸ್‌ಎಲ್ ತಜ್ಞರ ತಂಡದಿಂದ ಶೋಧ

ಹೊಸದಿಗಂತ ವರದಿ ಬೆಳ್ತಂಗಡಿ:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಮರುತನಿಖೆ ಮತ್ತಷ್ಟು ತೀವ್ರಗೊಳಿಸಿದ್ದು, ಘಟನಾ ಸ್ಥಳಗಳಿಗೆ ಎಫ್.ಎಸ್.ಎಲ್ ವಿಭಾಗದ ತಜ್ಞ ವೈದ್ಯರ ತಂಡ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ಬೆಂಗಳೂರು, ಬೆಳಗಾವಿ, ಹಾವೇರಿಯ ನುರಿತ ಮೂವರು ಎಫ್‌ಎಸ್‌ಎಲ್ ವೈದ್ಯರ ನೇತೃತ್ವದಲ್ಲಿ ಮೆಡಿಕಲ್ ಬೋರ್ಡ್ ರಚನೆ ಮಾಡಿದ್ದು, ಇದರ ಬೆನ್ನಿಗೇ ಎಫ್.ಎಸ್.ಎಲ್ ವಿಭಾಗದ ಮೂವರು ತಜ್ಞ ವೈದ್ಯರ ತಂಡ ಸೌಜನ್ಯ ಶವ ಪತ್ತೆಯಾದ ಧರ್ಮಸ್ಥಳ ಗ್ರಾಮದ ಮಣ್ಣಸಂಕ ಸ್ಥಳಕ್ಕೆ ಇಂದು ಸಂಜೆ ಎಸ್‌ಐಟಿ ಅಧಿಕಾರಿಗಳ ಜೊತೆಯಲ್ಲಿ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಸಂಧರ್ಭ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಸಮರ್ಥ್ ಆರ್ ಗಾಣಿಗೇರ ಮತ್ತು ಸಿಬ್ಬಂದಿ ಎಸ್‌ಐಟಿ ಅಧಿಕಾರಿಗಳ ಜೊತೆಯಲ್ಲಿದ್ದರು.

ಮೆಡಿಕಲ್‌ ಬೋರ್ಡ್ ತಜ್ಞ ವೈದ್ಯರ ತಂಡ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸೌಜನ್ಯ ಶವ ಸಿಕ್ಕ ದಿನದ ಫೋಟೋ ಹಾಗೂ ವಿಡಿಯೋ ಕೂಡ ಪರಿಶೀಲನೆ ನಡೆಸಿ ಕೊಲೆ ಮಾಡಿದ ಜಾಗವನ್ನು ನಿಖರವಾಗಿ ಎಸ್‌ಐಟಿ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

Must Read

Skip to toolbar