ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ಮೇಲೆ ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪಕ್ಕೆ ಸೂಕ್ತ ದಾಖಲೆಗಳನ್ನು ಕೊಟ್ಟರೆ ತನಿಖೆ ಮಾಡಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಗುತ್ತಿಗೆದಾರರು ಏನು ಆರೋಪ ಮಾಡಿದಾರೆ, ಅದಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಮಧ್ಯವರ್ತಿಗಳು ಯಾರು ಎಂದು ಮಾಹಿತಿ ನೀಡಲಿ. ದಾಖಲಾತಿ ಕೊಟ್ಟರೆ ದೂರು ಪರಿಶೀಲನೆ ಮಾಡುತ್ತೇವೆ ಯಾರು? ಏನು? ಎಂದು ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಖಂಡಿತ ಎಂದು ತಿಳಿಸಿದ್ದಾರೆ.