ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದ ದಿ. ಹರಿಭಾವೂ ವಝೆ ಅವರ ಕುರಿತಾದ ಪುಸ್ತಕವನ್ನು ಹೊರತರಲು ಆರ್‌ಎಸ್‌ಎಸ್ ನಿರ್ಧರಿಸಿದ್ದು, ಇವರ ಜೊತೆಗಿನ ಒಡನಾಟದ ಬಗೆಗೆ ಲೇಖನಗಳನ್ನು ಬರೆದು ಕಳುಹಿಸುವಂತೆ ಮನವಿ ಮಾಡಿದೆ.
ಮೈಸೂರಿನಲ್ಲಿ ವಿಭಾಗ ಪ್ರಚಾರಕರಾಗಿ, ವಿದ್ಯಾಭಾರತಿ ಮತ್ತು ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ವಝೆ ಅವರು ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. 92ರ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿದ್ದ ವಝೆ ಅವರು ಎಲ್ಲರಿಗೂ ಪ್ರೇರಕರಾಗಿದ್ದರು. ಸರಸ್ವತಿ ನದಿ ಸಂಶೋಧನೆಯಲ್ಲಿಯೂ ಅವರ ಸಾಧನೆ ಪ್ರಶಂಸನೀಯವಾಗಿತ್ತು.
ಇಷ್ಟೆಲ್ಲಾ ಸಾಧನೆ ಮಾಡಿದ ವಝೆ ಅವರ ಜೀವನದ ಬಗೆಗಿನ ಮಾಹಿತಿ ಸಂಗ್ರಹಿಸಿ ದಾಖಲಿಸಲು ಸಂಘದ ಹಿರಿಯ ಪ್ರಚಾರಕರಾದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಬೇಂಡೆ ಹಾಗೂ ಜೇಷ್ಠ ಪ್ರಚಾರಕರಾದ ಸು ರಾಮಣ್ಣ ಅವರ ಅಪೇಕ್ಷೆಯ ಮೇರೆಗೆ ಇತಿಹಾಸ ಸಂಕಲನ ಸಮಿತಿ ಪುಸ್ತಕ ಹೊರತರಲು ಮುಂದಾಗಿದೆ.
ವಝೆಯವರ ಜೊತೆಗಿನ ಒಡನಾಟ, ತಾವು ಕಂಡಂತೆ ವಝೆ ಅವರ ವ್ಯಕ್ತಿತ್ವ , ಅವರ ಕಾರ್ಯ ವೈಖರಿ,ಸಾಧನೆ ಇವುಗಳ ಬಗ್ಗೆ ಒಂದು ಲೇಖನ ಬರೆದು ಫೋಟೊಗಳಿದ್ದರೆ ಅವುಗಳನ್ನು ಕಳುಹಿಸಿಕೊಡಲು ಮನವಿ ಮಾಡಲಾಗಿದೆ.
ಈ ವಿಳಾಸಕ್ಕೆ ಕಳುಹಿಸಿಕೊಡಿ..
ಮೇಲ್ ವಿಳಾಸ: [email protected]
ಬ.ಸ. ಆನಂದ 94492-64729
ಎಂಐಜಿ 3, ಕೆಎಚ್‌ಬಿ, 3ನೇ ಫೇಸ್, 2ನೇ ಕ್ರಾಸ್, ಜೆಟಿಕೆ ಲೇಔಟ್, ಕುವೆಂಪುನಗರ ಮೈಸೂರು-570023
ಡಾ.ವಿ. ರಂಗನಾಥ್ 94482-08746
ಶಾ. ಪ್ರಸನ್ನ ಪ್ರಕಾಶ್ 94812-32249