200 ಶಾಸಕರಿಗೆ ಐಫೋನ್-13‌ ಉಡುಗೊರೆ ಕೊಟ್ಟು ಎಡವಟ್ಟು ಮಾಡಿಕೊಂಡ ರಾಜಸ್ಥಾನ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದ ಬಜೆಟ್‌ ಮಂಡನೆ ಮಾಡುವ ದಿನ ಎಲ್ಲಾ 200 ಶಾಸಕರಿಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸರ್ಕಾರ ಐಫೋನ್‌ 13 ಅನ್ನು ಉಡುಗೊರೆಯಾಗಿ ನೀಡಿದೆ.
ಕಳೆದ ವರ್ಷವೂ ಇದೇ ರೀತಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರ ಬಜೆಟ್‌ ಪ್ರತಿಯ ಜತೆಗೆ ಎಲ್ಲಾ ಶಾಸಕರಿಗೆ ಐಪ್ಯಾಡ್‌ ನೀಡಿತ್ತು.
ವಿಧಾನಸಬೆಯಲ್ಲಿ ಕಾಗದರಹಿತ ಬಜೆಟ್‌ ಮಂಡಿಸಲು ಹೋದ ಕಾಂಗ್ರೆಸ್‌ ಈಗ ನೇರವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿನ್ನು ಮರೆತು ಕಾಂಗ್ರೆಸ್‌ ಸರ್ಕಾರ ಸದಸ್ಯರನ್ನು ಹೈಟೆಕ್‌ ಮಾಡುವ ಉದ್ದೇಶ ಹೊಂದಿದೆ ಎಂದು ಕಿಡಿಕಾರುತಿದ್ದಾರೆ.
ನಿನ್ನೆ ಬಜೆಟ್‌ ಮಂಡಿಸುವ ವೇಳೆ ಸಿಎಂ ಅಶೋಕ್‌ ಗೆಹ್ಲೋಟ್‌ ಎಲ್ಲಾ ಶಾಸಕರಿಗೆ 70 ಸಾವಿರ ರೂ. ಮೌಲ್ಯದ ಐಫೋನ್‌-13 ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಆದರೆ ಅಲ್ಲಿನ ರಾಜ್ಯ ಬಿಜೆಪಿ ಶಾಸಕರು ಸರ್ಕಾರದ ದುಬಾರಿ ಐಫೋನ್‌ ಉಡುಗೊರೆಯನ್ನು ಹಿಂದಿರುಗಿಸಲು ತೀರ್ಮಾನಿಸಿದೆ.
ಈ ಬಗ್ಗೆ ಟ್ವೀಟ್‌ ಮಾಡಿದ ರಾಜ್ಯ ಬಿಜೆಪಿ, ರಾಜಸ್ಥಾನ ಸರ್ಕಾರದ ಕಾಗದರಹಿತ ಮತ್ತು ಹೈಟೆಕ್​ ಆಗಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ ಆರ್ಥಿತೆ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಷ್ಟು ದುಬಾರಿ ಮೊತ್ತದ ಮೊಬೈಲ್​ ಖರೀದಿ ಮಾಡಿದ್ದು ಸರಿಯಲ್ಲ. ಹೀಗಾಗಿ 71 ಬಿಜೆಪಿ ಶಾಸಕರು ಈ ಮೊಬೈಲ್‌ ಗಳನ್ನು ವಾಪಾಸ್​ ನೀಡಲಿದ್ದಾರೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!