IPL ಸಂಭ್ರಮ: ಲಕ್ನೋ ತಂಡದ ಸಾರಥಿಯಾಗಿ ರಿಷಬ್‌ ಪಂತ್|

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್‌ ಪ್ರೀಮಿಯರ್‌ ಲೀಗ್‌-2025ರ ಆವೃತ್ತಿಗೆ ಆಟಗಾರರರು ಸಜ್ಜಾಗುತ್ತಿದ್ದು, ಈ ಬಾರಿ ತಂಡಗಳಲ್ಲಿ ಹಲವು ಬದಲಾವಣೆ ಕೂಡ ಆಗಿದೆ.

ಇತ್ತ ಟೀಂ ಇಂಡಿಯಾ ಆಟಗಾರ ರಿಷಬ್‌ ಪಂತ್‌ ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

ಕೆ.ಎಲ್‌ ರಾಹುಲ್‌ (KL Rahul) ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ವಿಂಡೀಸ್‌ನ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗುತ್ತದೆ ಎಂಬ ವದಂತಿ ಹರಿದಾಡಿತ್ತು. ಆದ್ರೆ ವದಂತಿಗಳಿಗೆ ಬ್ರೇಕ್‌ ಹಾಕಿರುವ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು, ರಿಷಬ್‌ ಅವರಿಗೆ ನಾಯಕತ್ವದ ಹೊಣೆ ನೀಡಿದ್ದಾರೆ.

ರಿಷಬ್‌ಗೆ ಜೆರ್ಸಿ ವಿತರಿಸಿದ ಫೋಟೋದೊಂದಿಗೆ ಮಾಹಿತಿಯನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2025ರ ಐಪಿಎಲ್‌ (IPL 2025) ಆವೃತ್ತಿಗೆ ನಡೆದ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಬೆಲೆಗೆ ಹರಾಜಾದರು. 20.50 ಕೋಟಿ ರೂ.ವರೆಗೆ ಲಕ್ನೋ ತಂಡ ಬಿಡ್‌ ಮಾಡಿತ್ತು. ಈ ವೇಳೆ ಡೆಲ್ಲಿ ತಂಡ ಆರ್‌ಟಿಎಂ ಆಯ್ಕೆಗೆ ಮುಂದಾಯಿತು. ಪಂತ್‌ ಬಿಟ್ಟುಕೊಡದಿರಲು ಪಟ್ಟು ಹಿಡಿದ ಸಂಜೀವ್‌ ಗೋಯೆಂಕಾ ಏಕಾಏಕಿ 27 ಕೋಟಿ ರೂ.ಗಳಿಗೆ ಬೆಲೆ ಏರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!