ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹೈವೋಲ್ಟೇಜ್ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ ತಂಡಗಳು ಸೆಣಸಾಡಲಿವೆ.
ಪಂದ್ಯ ಆ ಎರಡು ತಂಡಗಳ ನಡುವೆ ನಡೆದರೂ ಆರ್ಸಿಬಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿದೆ. ಅದಕ್ಕೆ ಕಾರಣ ಈ ಪಂದ್ಯದ ಫಲಿತಾಂಶ ಆಧರಿಸಿಯೇ ನಿರ್ಧಾರವಾಗಲಿದೆ ಆರ್ಸಿಬಿ ಭವಿಷ್ಯ !. ಹೌದು.. ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಗೆದ್ದರೆ, ಫಾಫ್ ಡುಪ್ಲೆಸಿಸ್ ಬಳಗ ನೇರವಾಗಿ ಫ್ಲೇ ಆಫ್ ಗೆ ಎಂಟ್ರಿ ಕೊಡಲಿದೆ. ರಿಷಬ್ ಪಡೆ ಗೆದ್ದರೆ ಆರ್ಸಿಬಿ ತಂಡವನ್ನು ಹಿಂದಿಕ್ಕಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಆದ್ದರಿಂದ ಈ ಪಂದ್ಯ ಆರ್ಸಿಬಿ ಪಾಲಿಗೆ ಅಳಿವು ಉಳಿವಿನ ಪಂದ್ಯವಾಗಿರಲಿದೆ.
13 ಪಂದ್ಯಗಳನ್ನಾಡಿರುವ ಡೆಲ್ಲಿ 14 ಅಂಕಗಳನ್ನು ಕಲೆಹಾಕಿದೆ. ಆರ್ಸಿಬಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿ 16 ಅಂಕಗಳನ್ನು ಗಳಿಸಿಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಡೆಲ್ಲಿ ಅಂಕಗಳಿಕೆ 16 ಕ್ಕೇರಲಿದೆ. ಹಾಗಾದಲ್ಲಿ ಡೆಲ್ಲಿ ನೆಟ್ ರನ್ ರೇಟ್ ಆಧಾರದ ಮೇಲೆ ಡೆಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ಹಾಗೂ ಕೆಎಲ್ ರಾಹುಲ್ ಕ್ಯಾಪ್ಟನ್ಸಿಯ ಲಖನೌ ಈ ಗಾಗಲೇ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿವೆ.
ಡೆಲ್ಲಿಗೆ ಪ್ಲೇ ಆಪ್ ಒತ್ತಡ:
ಈ ಪಂದ್ಯದಲ್ಲಿ ಅನೇಕ ಹೊಸಮುಖಗಳಿಗೆ ಚಾನ್ಸ್ ನೀಡುವುದಾಗಿ ಮುಂಬೈ ಕಪ್ತಾನ ರೋಹಿತ್ ಘೋಷಿಸಿದ್ದು ಆರ್ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಹೇಗಾದರೂ ಸರಿ ಮುಂಬೈ ಈ ಪಂದ್ಯವನ್ನು ಗೆಲ್ಲಲಿ ಎಂದು ಆರ್ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಮುಂಬೈಗೆ ಗೆಲುವಿನೊಂದಿಗೆ ಅಭಿಯಾನಕ್ಕೆ ಅಂತ್ಯಹಾಡಲು ತಹತಹಿಸುತ್ತಿದೆ. ಮುಂಬೈ ವಿರುದ್ಧ ಗೆದ್ದು ಪ್ಲೇ ಆಪ್ ಪ್ರವೇಶಿಸುತ್ತೇವೆ ಎಂದು ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಸಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಬ್ಯಾಟಿಂಗ್ನಲ್ಲಿ ಡೇವಿಡ್ ವಾರ್ನರ್( 427) ಮಿಚೆಲ್ ಮಾರ್ಷ್ ( 251) ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಪಂತ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಸೇರಿದಂತೆ ಭಾರತೀಯ ಬ್ಯಾಟರ್ ಗಳು ಡೆಲ್ಲಿ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬೌಲಿಂಗ್ ನಲ್ಲಿ ಡೆಲ್ಲಿ ಪ್ರದರ್ಶನ ಸಾಧಾರಣವಾಗಿದೆ. ಸ್ಲಿನ್ನರ್ ಕುಲದೀಪ್ ಯಾದವ್ (20 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್ ಹೊರತು ಪಡಿಸಿದರೆ ಉಳಿದವರು ಉತ್ತಮ ಪ್ರದರ್ಶನ ತೋರಿಲ್ಲ. ಇಂದಿನ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿ ಗೆಲ್ಲುವ ಸವಾಲು ಡೆಲ್ಲಿ ತಂಡದ ಮೇಲಿದೆ. ಹಾಗಿದ್ದರೂ ಪ್ಲೇ ಆಫ್ ಪಂದ್ಯದ ಒತ್ತಡ ಡೆಲ್ಲಿ ತಂಡಕ್ಕೆ ಮುಳುವಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.