IPL 2025 Qualifier | ಬೆಂಗಳೂರು ಬೌಲಿಂಗ್ ದಾಳಿಗೆ ಎಡವಿದ ಪಂಜಾಬ್: ಆರ್‌ಸಿಬಿಗೆ 102 ರನ್‌ಗಳ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2025 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಕಲೆ ಹಾಕಿದ್ದು, ಗೆಲುವಿಗೆ ಸುಲಭ ಗುರಿ ನೀಡಿದೆ.

ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ಬೌಲರ್​ಗಳ ಮಾರಕ ದಾಳಿಗೆ ಸಿಲುಕಿದ ಅತಿಥೇಯ ಪಂಜಾಬ್ ಕಿಂಗ್ಸ್ 14.1 ಓವರ್​ಗಳಲ್ಲಿ ಕೇವಲ 101 ರನ್​ಗಳಿಗೆ ಆಲೌಟ್ ಆಗಿದೆ. 26 ರನ್​ಗಳಿಸಿ ಆಲ್​ರೌಂಡರ್​ ಮಾರ್ಕಸ್ ಸ್ಟೋಯಿನಿಸ್ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಟಾಸ್​ ಸೋತು ತವರಿನಲ್ಲಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಪರ 7 ರನ್​ಗಳಿಸಿದ್ದ ಕಳೆದ ಪಂದ್ಯದ ಹೀರೋ ಪ್ರಿಯಾಂಶ್ ಆರ್ಯ ವಿಕೆಟ್ ಒಪ್ಪಿಸಿದರು. 3ನೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟರ್ ಪ್ರಭಸಿಮ್ರನ್ ಸಿಂಗ್ 18 ರನ್​ಗಳಿಸಿ ಔಟ್ ಆದರು.ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (2) ಹಾಗೂ ಜೋಶ್ ಇಂಗ್ಲಿಸ್ (4) ಅಲ್ಪ ರನ್ ಗೆ ಪೆವಿಲಿಯನ್ ನತ್ತ ಮುಖಮಾಡಿದರು.

ಸ್ಟೋಯಿನಿಸ್​ ಒಂದೆರಡು ಬೌಂಡರಿ ಬಾರಿಸಿ ಚೇತರಿಕೆಯ ಮುನ್ಸೂಚನೆ ನೀಡಿದ್ದರು. ಆದರೆ ಪವರ್​ ಪ್ಲೇ ನಂತರ ಸ್ಪಿನ್ನರ್ ಸುಯಾಶ್ ಶರ್ಮಾ ಪಂಜಾಬ್ ಬ್ಯಾಟರ್​ಗಳನ್ನ ಕ್ರೀಸ್​ನಲ್ಲಿ ನಿಲ್ಲದಂತೆ ಮಾಡಿದರು. ಸ್ಫೋಟಕ ಆಟಗಾರ ಶಶಾಂಕ್ ಸಿಂಗ್ (3) ಹಾಗೂ ಇಂದೇ ಪದಾರ್ಪಣೆ ಮಾಡಿದ ಮುಷೀರ್ ಖಾನ್​​(0) ವಿಕೆಟ್​ಗಳನ್ನ ತಮ್ಮ ಮೊದಲನೇ ಓವರ್​​ನಲ್ಲಿ ಪಡೆದರು.

100 ರನ್​ಗಳ ಗಡಿ ದಾಟೋದು ಅನುಮಾನ ಎನ್ನುವ ಸಂದರ್ಭದಲ್ಲಿ ಒಮರ್ಝಾಯ್ ಹಾಗೂ ಹರ್ಪ್ರೀತ್ ಬ್ರಾರ್ 19 ರನ್​ಗಳ ಜೊತೆಯಾಟ ನೀಡಿದರು. ಆದರೆ ರೊಮಾರಿಯೋ ಶೆಫರ್ಡ್ ಬ್ರಾರ್​ರನ್ನ ಬೌಲ್ಡ್​ ಮಾಡಿದರು.18 ರನ್​ಗಳಿಸಿದ್ದ ಒಮರ್ಝಾಯ್ ವಿಕೆಟ್ ಒಪ್ಪಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!