March 28, 2026
Saturday, March 28, 2026
spot_img

IPL 2026 | ಮ್ಯಾಚ್ ಆರಂಭಕ್ಕೂ ಮುನ್ನ ಕಾಲ್ತುಳಿತಕ್ಕೆ ಬಲಿಯಾದ ಅಭಿಮಾನಿಗಳಿಗೆ ಸಂತಾಪ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ 2026 ರ ಐಪಿಎಲ್ ಹಬ್ಬ ಶುರುವಾಗಿದ್ದು, ಮೊದಲ ಪಂದ್ಯದಲ್ಲಿ 2026 ರ ಐಪಿಎಲ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದು, ಪಂದ್ಯ ಶುರುವಾಗುವ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳಿಂದ ಕಾಲ್ತುಳಿತದಿಂದ ಅಗಲಿದ 11 ಜನರಿಗೆ ಸಂತಾಪ ಸೂಚಿಸಲಾಯಿತು.

ಟಾಸ್ ಬಳಿಕ 1 ನಿಮಿಷದ ಮೌನಾಚರಣೆ ನಡೆಸಿ, ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಜೀವಗಳಿಗೆ ಸಂತಾಪ ಸೂಚಿಸಲಾಯಿತು. ಇದರ ಜೊತೆಗೆ ಎರಡು ತಂಡಗಳ ಆಟಗಾರರು ತಮ್ಮ ಕೈಗೆ ಕಪ್ಪು ಬ್ಯಾಂಡ್ ಧರಿಸಿ ಕಣಕ್ಕಿಳಿಯುವ ಮೂಲಕ ಗೌರವ ಸಮರ್ಪಣೆ ಮಾಡಿದ್ದಾರೆ.

ಆರ್​ಸಿಬಿ ಆಡಳಿತ ಮಂಡಳಿ ಹಾಗೂ ಕೆಎಸ್​ಸಿಎ ಅಗಲಿದ 11 ಜೀವಗಳ ನೆನಪನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಕ್ರೀಡಾಂಗಣದ ಮುಖ್ಯಧ್ವಾರದ ಬಳಿ ಸ್ಮಾರಕವನ್ನು ನಿರ್ಮಾಣ ಮಾಡಿದೆ. ಮೈದಾನದಲ್ಲಿ 11 ಆಸನಗಳನ್ನು ಖಾಲಿ ಇಡಲು ನಿರ್ಧರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !