ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಗುವಾಹಟಿಯಲ್ಲಿ ರಾಜಸ್ತಾನ ಬೌಲರ್ ಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್ ನೀಡಿದ್ದು, ಕೇವಲ 127 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಸಿಎಸ್ಕೆ ಆರಂಭದಲ್ಲೇ ಎಡವಿದ್ದು, ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ 6 ರನ್ ಗಳಿಸಿದರೆ ,ಸಂಜು ಸ್ಯಾಮ್ಸನ್ ಕೂಡ 6 ರನ್ ಗಳಿಸಿ ಪೆವಿಲಿಯನ್ ಹಾದಿಹಿಡಿದರು.
ಬಳಿಕ ಬಂದ ಆಯುಷ್ ಮ್ಹಾತ್ರೆ ಖಾತೆ ತೆರೆಯದೆ ಔಟಾದರೆ, ಮ್ಯಾಟ್ ಶಾರ್ಟ್ ಕೂಡ 2 ರನ್ಗಳಿಗೆ ಔಟಾದರು. ಇನ್ನು ಭರವಸೆ ಆಟಗಾರ ಶಿವಂ ದುಬೆ ಕೂಡ 6 ರನ್ಗಳಿಗೆ ಪೆವಿಲಿಯನ್ ನತ್ತ ಮುಖಮಾಡಿದರು.
ಇತ್ತ ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಅತ್ತ ಏಕಾಂಗಿ ಹೋರಾಟ ನೀಡಿದ ಜೆಮಿ ಓವರ್ಟನ್ ತಂಡಕ್ಕೆ ಆಸರೆಯಾದರು. ಇದರಿಂದಾಗಿ ಸಿಎಸ್ಕೆ ಮೊತ್ತ 100 ರನ್ಗಳ ಗಡಿ ದಾಟಿಸಿತು.
ಇತ್ತ ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.



