Monday, October 13, 2025

ಐಪಿಎಲ್ 2026 ಮಿನಿ ಹರಾಜು: ಆಟಗಾರರ ರಿಟೈನ್​ಗೆ ಡೇಟ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಮತ್ತು ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಈ ಕುರಿತು ನಿರ್ದಿಷ್ಟ ದಿನಾಂಕವನ್ನು ನಿಗದಿ ಮಾಡಿ, ನವೆಂಬರ್ 15 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಲು ಬಯಸಿದ ಆಟಗಾರರನ್ನು ಉಳಿಸಿ, ಉಳಿದವರನ್ನು ಬಿಡುಗಡೆ ಮಾಡಬೇಕು.

ಕಳೆದ ಮೆಗಾ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳಿಗೆ ಕನಿಷ್ಠ 6 ಆಟಗಾರರನ್ನು ಮಾತ್ರ ರಿಟೈನ್ ಮಾಡುವ ಅವಕಾಶವಿತ್ತು ಮತ್ತು ಕೆಲವು ನಿಯಮಾವಳಿಗಳನ್ನು ಅನುಸರಿಸಬೇಕಾಗಿತ್ತು. ಆದರೆ ಈ ಬಾರಿಯ ಮಿನಿ ಹರಾಜಿನಲ್ಲಿ ಯಾವುದೇ ನಿಯಮಾವಳಿಗಳಿಲ್ಲದೆ, ಫ್ರಾಂಚೈಸಿಗಳು ತಮಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು.

ಈ ಪಟ್ಟಿಯನ್ನು ಸಲ್ಲಿಸಿದ ನಂತರ, ಹರಾಜಿಗೆ ಎಷ್ಟು ಸ್ಥಾನಗಳು ಉಳಿದಿವೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಪ್ರತಿ ಫ್ರಾಂಚೈಸಿಯು ಒಟ್ಟು 25 ಆಟಗಾರರನ್ನು ಹೊಂದಬಹುದಾದಂತೆ ಐಪಿಎಲ್ ನಿಯಮಾವಳಿ ಇದ್ದು, ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿದ ಹಿನ್ನೆಲೆಯಲ್ಲಿ ಮಿನಿ ಹರಾಜು ಕಡಿಮೆ ಸಂಖ್ಯೆಯ ಸ್ಥಾನಗಳಿಗೆ ಮಾತ್ರ ನಡೆಯಲಿದೆ. ಉದಾಹರಣೆಗೆ, 10 ಫ್ರಾಂಚೈಸಿಗಳು ಒಟ್ಟು 200 ಆಟಗಾರರನ್ನು ರಿಟೈನ್ ಮಾಡಿದರೆ, ಉಳಿದ 50 ಸ್ಥಾನಗಳ ಮಾತ್ರ ಹರಾಜು ನಡೆಸಲಾಗುವುದು. ಇದರಿಂದ ಹರಾಜು ಒಂದೇ ದಿನದಲ್ಲಿಯೇ ಮುಗಿಯುವ ಸಾಧ್ಯತೆ ಇದೆ.

error: Content is protected !!