April 16, 2026
Thursday, April 16, 2026
spot_img

ಐಪಿಎಲ್ ಆರಂಭಕ್ಕೆ ಕ್ಷಣಗಣನೆ: ಮುಂಬೈ ಇಂಡಿಯನ್ಸ್​ ಮುಂದೆ ಡಿಮ್ಯಾಂಡ್ ಇಟ್ಟ ರೋಹಿತ್ ಶರ್ಮಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಬಾಕಿ ಇದ್ದು,ಈಗಾಗಲೇ ಎಲ್ಲ ತಂಡಗಳು ಮೈದಾನದಲ್ಲಿ ತರಬೇತಿಯಲ್ಲಿ ತೊಡಗಿದೆ.

ಇದರ ನಡುವೆ ಮುಂಬೈ ಇಂಡಿಯನ್ಸ್​ ನ ಸ್ಪೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ , ಮ್ಯಾನೇಜ್‌ಮೆಂಟ್‌ ಮುಂದೆ ವಿಶೇಷ ಮನವಿಯೊಂದು ಮಾಡಿಕೊಂಡಿದ್ದಾರೆ.

ಕಳೆದ ಬಾರಿ ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ರೋಹಿತ್, ಈ ಬಾರಿ ಆ ರೀತಿಯಾಗಿ ಆಡಲು ನಿರಾಕರಿಸಿದ್ದಾರೆ.

ಈ ಬಾರಿ ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗದೆ, ಫೀಲ್ಡಿಂಗ್ ಒಳಗೊಂಡಂತೆ ಸಂಪೂರ್ಣ ಮೈದಾನದಲ್ಲಿ ಇರಲು ಬಯಸುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಇನ್ನು ರೋಹಿತ್ ನಿಲುವಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಧ್ವನಿಗೂಡಿಸಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮೈದಾನದಲ್ಲಿ ಹಿರಿಯ ಆಟಗಾರನಾಗಿ ಸಲಹೆ ನೀಡಲು ರೋಹಿತ್ ಪೂರ್ಣ ಸಮಯ ಮೈದಾನದಲ್ಲಿ ಇರುವುದು ತಂಡಕ್ಕೆ ಪ್ಲಸ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !