March 6, 2026
Friday, March 6, 2026
spot_img

IPL 2026: ಆರ್‌ಸಿಬಿ ಅಯ್ತು, ಈಗ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮಾರಾಟಕ್ಕೆ ನಡೀತಿದೆ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಸೀಸನ್‌ಗೂ ಮುನ್ನವೇ ಲೀಗ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸುವ ಲಕ್ಷಣಗಳು ಕಾಣಿಸುತ್ತಿವೆ. ಕೆಲವು ಪ್ರಮುಖ ಫ್ರಾಂಚೈಸಿಗಳನ್ನು ಹೊಸ ಮಾಲೀಕರು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಕ್ರೀಡಾ ವಲಯದಲ್ಲಿ ಚರ್ಚೆ ಜೋರಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವವನ್ನು ಹಸ್ತಾಂತರಿಸುವ ಬಗ್ಗೆ ಪ್ರಸ್ತುತ ಮಾಲೀಕರು ಆಸಕ್ತಿ ತೋರಿರುವುದಾಗಿ ತಿಳಿದುಬಂದಿದೆ. ಇದಕ್ಕಾಗಿ ವಿವಿಧ ಕಂಪನಿಗಳು ಮತ್ತು ಉದ್ಯಮಿಗಳು ಬಿಡ್ ಸಲ್ಲಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಇದಕ್ಕೂ ಜೊತೆಗೂಡಿ ರಾಜಸ್ಥಾನ್ ರಾಯಲ್ಸ್ ತಂಡದ ಫ್ರಾಂಚೈಸಿ ಮಾರಾಟಕ್ಕೂ ಮಾತುಕತೆಗಳು ನಡೆಯುತ್ತಿವೆ. ಒಂದು ಹಣಕಾಸು ಸಂಸ್ಥೆ ಈ ಫ್ರಾಂಚೈಸಿಯ ಬಹುಪಾಲನ್ನು ಖರೀದಿಸಲು ಆಸಕ್ತಿ ತೋರಿದ್ದು, ಒಪ್ಪಂದ ನಡೆದರೆ ತಂಡದ ಹೆಸರಿನಲ್ಲೂ ಬದಲಾವಣೆ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತಿವೆ.

ಇನ್ನೊಂದೆಡೆ ಆರ್‌ಸಿಬಿ ಖರೀದಿಗೆ ದೇಶಿ-ವಿದೇಶಿ ಹೂಡಿಕೆದಾರರು ಗಮನ ಹರಿಸಿದ್ದು, ಭವಿಷ್ಯದಲ್ಲಿ ತಂಡದ ಮಾಲೀಕತ್ವದಲ್ಲೇ ಅಲ್ಲ, ಅದರ ಗುರುತಿನಲ್ಲೂ ಬದಲಾವಣೆ ಕಾಣಬಹುದೆಂಬ ಕುತೂಹಲ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !