March 25, 2026
Wednesday, March 25, 2026
spot_img

ಐಪಿಎಲ್ 2026 ಆರಂಭದ ದಿನಾಂಕ ಫಿಕ್ಸ್: ಚುನಾವಣಾ ಎಫೆಕ್ಟ್‌ನಿಂದ ವೇಳಾಪಟ್ಟಿ ಎರಡು ಹಂತದಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಜ್ವರದ ಬೆನ್ನಲ್ಲೇ ಈಗ ಭಾರತದಲ್ಲಿ ಐಪಿಎಲ್ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. 19ನೇ ಆವೃತ್ತಿಯ ಐಪಿಎಲ್ ಆರಂಭದ ದಿನಾಂಕದಲ್ಲಿ ಅಲ್ಪ ಬದಲಾವಣೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಮೊದಲು ಮಾರ್ಚ್ 26 ಎನ್ನಲಾಗಿತ್ತು, ಆದರೆ ಈಗ ಮಾರ್ಚ್ 28 ಕ್ಕೆ ಮುಂದೂಡಲ್ಪಟ್ಟಿದೆ.

ಆರಂಭ ವಿಳಂಬವಾದರೂ, ಸಮಾರೋಪ ಪಂದ್ಯ ಮಾತ್ರ ನಿಗದಿಯಂತೆ ಮೇ 31 ರಂದೇ ನಡೆಯಲಿದೆ.

ಮುಂಬರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಪೂರ್ಣ ಪ್ರಮಾಣದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಡಿಸೆಂಬರ್‌ನಲ್ಲಿ ನಡೆದ ಹರಾಜಿನ ವೇಳೆ ಮಾರ್ಚ್ 26 ರ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಐಪಿಎಲ್ ಆಡಳಿತ ಮಂಡಳಿಯು ಮುಂದಿನ ವಾರ ಸಭೆ ಸೇರಿ ಮಾರ್ಚ್ 28 ರ ಆರಂಭಕ್ಕೆ ಅಧಿಕೃತ ಮುದ್ರೆ ಒತ್ತಲಿದೆ. ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗದ ದಿನಾಂಕಗಳ ಪ್ರಕಟಣೆಗಾಗಿ ಬಿಸಿಸಿಐ ಕಾಯುತ್ತಿದ್ದು, ಐಪಿಎಲ್ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !