ನಾಳೆ ಐಪಿಎಲ್ ಬಿಗ್ ಫೈನಲ್ ಮ್ಯಾಚ್: ಮಳೆಯಿಂದ ಪಂದ್ಯ ರದ್ದಾದ್ರೆ ಏನಾಗುತ್ತೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್‌ 18ರ ಫೈನಲ್‌ಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ. ಇದೀಗ ಪಂಜಾಬ್‌ ಕೂಡ ಎಂಟ್ರಿ ಪಡೆದಿದ್ದು, ನಾಳೆ ಬಿಗ್ ಮ್ಯಾಚ್
ನಡೆಯಲಿದೆ.

ಎಡರು ತಂಡಗಳು ಮೊದಲ ಬಾರಿಗೆ ಗೆಲುವಿನ ಕಿರೀಟ ಮುಡಿಗೇರಿಸಿಕೊಳ್ಳಲು ಸಜ್ಜಾಗಿದೆ. ಆದರ ಫ್ಯಾನ್ಸ್ ಕನಸಿಗೆ ಮಳೆರಾಯ ಅಡ್ಡಿಯಾಗಿದ್ದಾನೆ.

ನಾಳೆ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಸೆಣಸಾಟ ನಡೆಸಲಿದೆ. ಆದರೆ ಮಳೆರಾಯನ ಅಬ್ಬರ ನರೇಂದ್ರ ಮೋದಿ ಸ್ಟೇಡಿಯಂನ ಬಿಟ್ಟು ಬಿಡದೇ ಕಾಡುತ್ತಿದೆ. ನಿನ್ನೆಯಂತೆ ಇಂದೂ ಕೂಡ ಅಹಮದಾಬಾದ್‌ನಲ್ಲಿ ವರುಣನ ಅಬ್ಬರ ಜೋರಾಗಿತ್ತು. ಇದೀಗ ನಾಳಿನ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ನಾಳೆ ಪಂದ್ಯ ರದ್ದಾದ್ರೆ ಏನಾಗುತ್ತೆ?
ಐಪಿಎಲ್ ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಮತ್ತೊಂದು ರಿಸರ್ವ್‌ ಡೇ ಇದೆ. ಅಂದ್ರೆ ಮಂಗಳವಾರ ಮಳೆಯಿಂದ ಪಂದ್ಯ ರದ್ದಾದ್ರೆ ಬುಧವಾರ ಐಪಿಎಲ್‌ ಫೈನಲ್‌ ಪಂದ್ಯ ಆಡಲು ಅವಕಾಶ ಇದೆ. ಒಂದು ವೇಳೆ ಮಂಗಳವಾರ, ಬುಧವಾರ 2 ದಿನ ಪಂದ್ಯ ಕೊಚ್ಚಿ ಹೋದ್ರೆ ಐಪಿಎಲ್ ನಿಯಮಾವಳಿಯಂತೆ ಪಂಜಾಬ್ ಕಿಂಗ್ಸ್ ಈ ಬಾರಿ ಕಪ್ ಗೆಲ್ಲಲಿದೆ. ಐಪಿಎಲ್‌ ಸೀಸನ್ 18ರಲ್ಲಿ ಪಂಜಾಬ್ ಕಿಂಗ್ಸ್ ಟೇಬಲ್ ಟಾಪ್ ಆಗಿರೋದ್ರಿಂದ ಐಪಿಎಲ್‌ ಚಾಂಪಿಯನ್ ಎಂದು ಘೋಷಣೆ ಮಾಡಲಾಗುತ್ತೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!