ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ನಲ್ಲಿ ಇಂದು ಮುಂಬೈ ಇಂಡಿಯನ್ಸ್ (MI vs DC) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಎರಡೂ ತಂಡಗಳಿಗೆ ಪ್ಲೇಆಫ್‌ಗೆ (Play Off) ತಲುಪಲು ಅತ್ಯಂತ ನಿರ್ಣಾಯಕವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಮಾಡಲು ನಿರ್ಧರಿಸಿದೆ. ಇತ್ತ ಡೆಲ್ಲಿ ತಂಡ ನಾಯಕ ಅಕ್ಷರ್ ಪಟೇಲ್ ಇಲ್ಲದೆ ಇಂದು ಕಣಕ್ಕಿಳಿಯುತ್ತಿದೆ. ಅನಾರೋಗ್ಯದ ಕಾರಣ ಅಕ್ಷರ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ 6 ಗೆಲುವು, 5 ಸೋಲು, 1 ರದ್ದು ಸೇರಿ 13 ಅಂಕಗಳನ್ನು ಹೊಂದಿದ್ದು, ಶತಾಯಗತಾಯ ಈ ಪಂದ್ಯವನ್ನ ಗೆಲ್ಲಲೇ ಬೇಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ರೇಸ್ನಲ್ಲಿ ಉಳಿಯಲಿದೆ. ಸೋತರೇ ಇನ್ನು ಒಂದು ಪಂದ್ಯ ಇರುವಂತೆ ಟೂರ್ನಿಯಿಂದ ಹೊರಬೀಳಲಿದೆ. ಕೊನೆಯ ಪಂದ್ಯದ ಫಲಿತಾಂಶ ತಂಡಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಹಾಗಾಗಿ ಮುಂಬೈಗಿಂತಲೂ ಈ ಪಂದ್ಯ ಡೆಲ್ಲಿ ನಿರ್ಣಾಯಕವಾಗಿದೆ.
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 5ರಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಪ್ರಸ್ತುತ 4ನೇ ಸ್ಥಾನದಲ್ಲಿರುವ ಮುಂಬೈ ಇಂದಿನ ಪಂದ್ಯವನ್ನ ಗೆದ್ದರೆ ತನ್ನ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಳ್ಳಲಿದೆ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರಿಯಾನ್ ರಿಕಲ್ಟನ್(w), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ಸಿ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್(ನಾಯಕ), ಅಭಿಷೇಕ್ ಪೊರೆಲ್(ವಿಕೀ), ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಟ್ರಿಸ್ಟಾನ್ ಸ್ಟಬ್ಸ್, ದುಷ್ಮಂತ ಚಮೀರಾ, ವಿಪ್ರಜ್ ನಿಗಮ್, ಮಾಧವ್ ತಿವಾರಿ, ಕುಲದೀಪ್ ಯಾದವ್, ಮುಸ್ತಫಿಜುರ್ ರೆಹಮಾನ್, ಮುಖೇಶ್ ಕುಮಾರ್