ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಸವಾಲಿಗೆ ಸಿದ್ಧವಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮೆಗಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ರಾಜಸ್ಥಾನ ರಾಯಲ್ಸ್ ಗೆಲುವಿಗೆ ಬ್ರೇಕ್ ಹಾಕುವ ಲೆಕ್ಕಚಾರದಲ್ಲಿ ಆರ್‌ಸಿಬಿ ತಂತ್ರ ರೂಪಿಸಿದೆ.
ಹೌದು! ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಬೇಕಾದರೆ, ರಾಜಸ್ಥಾನ್ ರಾಯಲ್ಸ್‌ನ ಡಬಲ್ ಜೋಡಿಯ ವಿರುದ್ಧ ಆರ್‌ಸಿಬಿ ಗೆದ್ದರೆ ಮಾತ್ರ ಸಾಧ್ಯ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ಸವಾಲೇ ಎಡಗೈ ಆಟಗಾರರಾದ ಟ್ರೆಂಟ್ ಬೋಲ್ಟ್ ಆ್ಯಂಡ್ ನಾಂದ್ರೆ ಬರ್ಗರ್ 145ರ ವೇಗದಲ್ಲಿ ಚೆಂಡನ್ನ ಎಸೆಯಬಲ್ಲ ಇವರು, ಸ್ವಿಂಗ್, ಯಾರ್ಕರ್ ಎಸೆಯುವಲ್ಲಿ ನಿಸ್ಸೀಮರು.
ಇಂದಿನ ಪಂದ್ಯದ ಬ್ಯಾಟಲ್ ಅಂದ್ರೆ, ಅದು ಆರ್ಸಿಬಿಯ ಬ್ಯಾಟಿಂಗ್ ವರ್ಸಸ್ ಆರ್ಆರ್ ಬೌಲಿಂಗ್. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ ಆರ್ಡರ್ ಮೈಕೊಡವಿ ನಿಲ್ಲಬೇಕು. ಪ್ರಮುಖವಾಗಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹೆಸರಿಗೆ ತಕ್ಕಂತ ಆಟವಾಡಬೇಕಿದೆ.