April 13, 2026
Monday, April 13, 2026
spot_img

IPLನಲ್ಲಿ ಫೈನ್ ಗಳ ಸುರಿಮಳೆ: ಈಗ ದಂಡ ಕಟ್ಟೋ ಸರದಿ MI ಕ್ಯಾಪ್ಟನದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಆರ್‌ಸಿಬಿ ವಿರುದ್ಧದ ಸೋಲಿನಿಂದ ತಂಡವು ಈ ಆವೃತ್ತಿಯಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿದ್ದು, ಅದರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡದ ಶಿಕ್ಷೆಯೂ ವಿಧಿಸಲಾಗಿದೆ.

ಪಂದ್ಯದ ವೇಳೆ ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ, ಐಪಿಎಲ್ ಶಿಸ್ತು ಸಂಹಿತೆಯ ಪ್ರಕಾರ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಓವರ್ ರೇಟ್ ನಿಯಮ ಅತ್ಯಂತ ಮಹತ್ವದ್ದಾಗಿದ್ದು, ಮೊದಲ ತಪ್ಪಿಗೆ ಹಣದ ದಂಡ, ಮರುಕಳಿಸಿದರೆ ಹೆಚ್ಚುವರಿ ಕ್ರಮಗಳೂ ಎದುರಾಗಬಹುದು.

ಇದನ್ನೂ ಓದಿ:

ಈ ಸೋಲಿನ ಬಳಿಕ ಹಾರ್ದಿಕ್ ಅವರ ನಾಯಕತ್ವವೂ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಅನುಭವಿ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಹತ್ತು ಓವರ್‌ಗಳ ಬಳಿಕ ಬೌಲಿಂಗ್‌ಗೆ ಕರೆತಂದ ನಿರ್ಧಾರವನ್ನು ಹಲವು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದಾರೆ. ಆರಂಭದಲ್ಲೇ ಒತ್ತಡ ತರಬಹುದಾಗಿದ್ದ ಬೌಲರ್ ಅನ್ನು ತಡವಾಗಿ ಬಳಸಿದ್ದರಿಂದ ಆರ್‌ಸಿಬಿಗೆ ದೊಡ್ಡ ಮೊತ್ತ ಕಲೆಹಾಕಲು ಅವಕಾಶ ಸಿಕ್ಕಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !