ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 22 ರಂದು ಚೆಪಾಕ್ ಸ್ಟೇಡಿಯಂನಲ್ಲಿ IPL 2024ನ ಮೊದಲ ಪಂದ್ಯ ಪ್ರಾರಂಭಿಸಲಿದೆ.
ಎಲ್ಲಾ ಆಟಗಾರರು ಈಗಾಗಲೇ ತಮ್ಮ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಆರ್ ಸಿಬಿ ಶಿಬಿರಕ್ಕೆ ಬಂದು ಅಭ್ಯಾಸ ಆರಂಭಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಹಾಗೂ ಮ್ಯಾಕ್ಸ್ ವೆಲ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂದು ಆರ್ಸಿಬಿ ಅನ್ಬಾಕ್ಸಿಂಗ್ ಕಾರ್ಯಕ್ರಮವೂ ನಡೆಯಲಿದ್ದು. ಇದರಲ್ಲಿ ತಂಡದ ಸ್ಟಾರ್ ಆಟಗಾರರೂ ಭಾಗವಹಿಸಲಿದ್ದಾರೆ. ಆರ್ಸಿಬಿ ಮಹಿಳಾ ತಂಡವೂ ಪಾಲ್ಗೊಳ್ಳಲಿದೆ ಎನ್ನಲಾಗಿದೆ.