IPL | ಮುಂಬೈ ಇಂಡಿಯನ್ಸ್ ಬಂತು ಆನೆ ಬಲ: ಟೀಮ್ ಗೆ ಎಂಟ್ರಿ ಕೊಟ್ಟ ಒರ್ಲ್ಡ್ ಬೆಸ್ಟ್ ಬೌಲರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಈ ಬಾರಿಯೂ ಮುಂಬೈ ಇಂಡಿಯನ್ಸ್​ಗೆ ಶಾವೋಲಿನ ಕಹಿ ಅನುಭವ ಆಗುತ್ತಿದೆ. ಮುಂಬೈ ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಸೋಲಿನತ್ತ ಸಾಗುತ್ತಿದೆ ಎಂದು ಹೇಳಾಗುತ್ತಿದೆ. ಈ ನಡುವೆ ಯಾರ್ಕರ್ ಸ್ಪೆಷಲಿಸ್ಟ್​, ಒರ್ಲ್ಡ್​ ನಂಬರ್-1 ಬೌಲರ್ ಜಸ್​ಪ್ರಿತ್ ಬೂಮ್ರಾ ಅವರು ಟೀಮ್ ಗೆ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಕೆಲವು ತಿಂಗಳುಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಜಸ್​ಪ್ರಿತ್ ಬೂಮ್ರಾ ಅವರು ಈಗ ಎಲ್ಲ ರೀತಿಯಲ್ಲೂ ಚೇತರಿಸಿಕೊಂಡು 2025ರ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ. ಈಗಾಗಲೇ ಸೋತು ಸೊರಗಿರುವ ಮುಂಬೈಗೆ, ಒರ್ಲ್ಡ್ ಬೆಸ್ಟ್ ಬೌಲರ್ ಆಗಮನದಿಂದ ಸಂತಸದಲ್ಲಿ ತೇಲಾಡುತ್ತಿದೆ.

ಈ ಕುರಿತು ಮುಂಬೈ ಇಂಡಿಯನ್ಸ್​ ಸ್ಪೆಷಲ್ ವಿಡಿಯೋ ಮೂಲಕ ಜಸ್​ಪ್ರಿತ್ ಬೂಮ್ರಾ ಅವರ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಬೂಮ್ರಾ ಬಾಲ್ ಹಿಡಿದುಕೊಂಡು ಸಿಂಹಾಸನದ ಮೇಲೆ ಕುಳಿತುಕೊಳ್ಳುವ ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಬ್ಯಾಗ್​ಗ್ರೌಂಡ್ ಮ್ಯೂಸಿಕ್, ವಾಯ್ಸ್ ಇದೆ. ಇಷ್ಟೇ ಅಲ್ಲದೇ ವಿಡಿಯೋಗೆ 𝑹𝑬𝑨𝑫𝒀 𝑻𝑶 𝑹𝑶𝑨𝑹 ಎನ್ನುವ ಟ್ಯಾಗ್ ಲೈನ್ ಸಖತ್ ಕಿಕ್ ಕೊಡುತ್ತಿದೆ. ​

ನಾಳೆ ವಾಂಖೆಡೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ನಡೆಯುವ ಪಂದ್ಯದಲ್ಲಿ ಮುಂಬೈ ಪರ ಬೂಮ್ರಾ ಅಖಾಡಕ್ಕೆ ಧುಮಕಲಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!