IPL | ಕೋಟಿ ಕೋಟಿ ದುಡ್ಡು ಸುರಿದರೂ ಪಂತ್ ಬ್ಯಾಟಿಂಗ್​ನಲ್ಲಿ ನೋ ಚೇಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್​ ವಿರುದ್ದದ ಇಂದಿನ ಪಂದ್ಯದಲ್ಲೂ ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ರಿಷಭ್ ಪಂತ್ ಅವರು ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದು , ಕೇವಲ 2 ರನ್​ಗೆ ಔಟ್ ಆಗಿದ್ದಾರೆ.

ಲಕ್ನೋದ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಉತ್ತಮ ಪರ್ಫಾಮೆನ್ಸ್ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರಿಷಭ್ ಪಂತ್ ಕೇವಲ 6 ಬಾಲ್​ಗಳಲ್ಲಿ 2 ರನ್​ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ.

ಇನ್ನು ಈ ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿರುವ ಲಕ್ನೋ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಈಗ 4ನೇ ಪಂದ್ಯ ಆಡುತ್ತಿದೆ. ಆದರೆ 4 ಮ್ಯಾಚ್​ಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ರಿಷಭ್ ಪಂತ್ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ರೆ, 2ನೇ ಪಂದ್ಯದಲ್ಲಿ ಕೇವಲ 15 ರನ್​ಗೆ ಔಟ್ ಆಗಿದ್ದರು. ಇದಾದ ಮೇಲೆ 3ನೇ ಪಂದ್ಯದಲ್ಲಿ ಕೇವಲ 2 ರನ್​, ಈಗ ಮುಂಬೈ ವಿರುದ್ಧವೂ ಕೇವಲ 2 ರನ್​ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್​ ಮೆಗಾ ಹರಾಜಿನಲ್ಲಿ ಪಂತ್ ಮೇಲೆದಾಖಲೆಯ 27 ಕೋಟಿ ಹಣ ಸುರಿದು ಟೀಮ್ ಗೆ ಕರೆತಂದಿತ್ತು. ಆದ್ರೆ ರಿಷಭ್ ಪಂತ್ ಆಟ ಅಟ್ಟರ್ ಫ್ಲಾಫ್ ಪರ್ಫಾಮೆನ್ಸ್ ಆಗಿದೆ​.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!