ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಭವ್ ಸೂರ್ಯವಂಶಿ ಅಮೋಘ ಅರ್ಧಶತಕದ ಆಟದಿಂದ ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಮ್ಯಾಚ್ ಗೆದ್ದು ಸಂಭ್ರಮಿಸಿದೆ.
ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ಕೇವಲ 127ಕ್ಕೆ ಆಲೌಟ್ ಅಗಿತ್ತು. ಇದನ್ನು ಬೆನ್ನತ್ತಿದ್ದ ರಾಜಸ್ಥಾನ್ 12.1 ಓವರ್ ನಲ್ಲಿ ಗುರಿ ತಲುಪಿದ್ದು, ಮೊದಲ ಗೆಲುವಿನ ಶುಭಾರಂಭ ಮಾಡಿದೆ.
ರಾಜಸ್ಥಾನ ಪರ ಸೂರ್ಯವಂಶಿ ಸಿಡಿಲಬ್ಬರದ ಆಟವಾಡಿದ್ದು, 15 ಎಸೆತಕ್ಕೆ ಅರ್ಧಶತಕ ಸಿಡಿಸಿ ಅಂತಿಮವಾಗಿ 52 ರನ್ ಗಳಿಸಿ ಔಟಾದರು. ಬಳಿಕ ಯಶಸ್ವಿ ಜೈಸ್ವಾಲ್ 38 ರನ್ ಗಾಲ ಸಾಥ್ ನೀಡಿದರು. ಧ್ರುವ್ ಜುರೇಲ್ 18 ರನ್, ನಾಯಕ ರಿಯಾನ್ ಪರಾಗ್ ಔಟಾಗದೇ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.



