IPL | ಯಪ್ಪಾ ಎಂಥ ಕ್ಲೈಮಾಕ್ಸ್ ಗುರು! ರೆಡ್ ಆರ್ಮಿ ಆರ್ಭಟಕ್ಕೆ ಯೆಲ್ಲೋ ಟೀಮ್ ಧೂಳಿಪಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL ಶುರುವಾಗಿ 18 ವರ್ಷಗಳಾಗಿವೆ. ಈ ಹದಿನೆಂಟು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲ್ಲಾ ಸೀಸನ್ ಆಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 16 ಸೀಸನ್​ಗಳನ್ನು ಮಾತ್ರ ಆಡಿದೆ. ಅಂದರೆ 2016 ಮತ್ತು 2017 ರಲ್ಲಿ ಸಿಎಸ್​ಕೆ ಬ್ಯಾನ್ ಆಗಿತ್ತು.

ಈ 16 ಸೀಸನ್​ಗಳಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಿವೆ. ಆದರೆ ಇದೇ ಮೊದಲ ಬಾರಿಗೆ ಒಂದೇ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಸೋಲಿಸುವಲ್ಲಿ ಆರ್​ಸಿಬಿ ಪಡೆ ಯಶಸ್ವಿಯಾಗಿದೆ.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 8ನೇ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು 50 ರನ್​ಗಳಿಂದ ಬಗ್ಗು ಬಡಿಯುವಲ್ಲಿ ಆರ್​ಸಿಬಿ ಯಶಸ್ವಿಯಾಗಿತ್ತು. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 52ನೇ ಪಂದ್ಯದಲ್ಲೂ ಸಿಎಸ್​ಕೆ ತಂಡಕ್ಕೆ ಸೋಲುಣಿಸುವಲ್ಲಿ ಆರ್​ಸಿಬಿ ಪಡೆ ಸಫಲರಾಗಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 213 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕ 211 ರನ್​ಗಳಿಸಿ 2 ರನ್​ಗಳಿಂದ ಸೋತಿದೆ.

ಈ ಗೆಲುವುಗಳೊಂದಿಗೆ ರಾಯಲ್ ಪಡೆಯು ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್​ನಲ್ಲಿ ಪಾತಾಳಕ್ಕೆ ಕುಸಿದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!