ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಹೊಸ ಅಧ್ಯಾಯ ಪ್ರಾರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ.
ಐಪಿಎಲ್ ಆರಂಭಕ್ಕೂ ಮುನ್ನ, RCBಗೆ ಹೊಸ ಸಮಸ್ಯೆಗಳು ಉದ್ಭವಿಸಿವೆ. ವಿರಾಟ್ ಕೊಹ್ಲಿ ಮತ್ತು ಕಮರೂನ್ ಗ್ರೀನ್ ನಡುವಿನ ಆರ್‌ಸಿಬಿ ಇನ್ನಿಂಗ್ಸ್ ಅನ್ನು ಯಾರು ಮೊದಲು ಶುರು ಮಾಡಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಯಾರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂಬ ಗೊಂದಲ ಉಂಟಾಗಿದೆ.
ಒಂದು ತಂಡದ ಯಶ್ಸಸಿಗೆ ಓಪನಿಂಗ್ ಪಾರ್ಟನರ್ಶಿಪ್ ಅನ್ನೋದು ಬಹಳ ಮುಖ್ಯ. ಇದಕ್ಕೆ ತಕ್ಕಂತೆ ಕಳೆದ ಸೀಸನ್ನಲ್ಲಿ ಕ್ಯಾಪ್ಟನ್ ಫಾಫ್ ಹಾಗೂ ವಿರಾಟ್ ಅದ್ಭುತ ಪ್ರದರ್ಶನ ನೀಡಿದ್ದರು. ಆದ್ರೀಗ ಸ್ಫೋಟಕ ಬ್ಯಾಟ್ಸ್ಮನ್ ಕಮರೂನ್ ಗ್ರೀನ್ ಆಗಮನದಿಂದ ಸ್ಟ್ರಾಟರ್ಜಿ ಬದಲಿಸುವ ಸಾಧ್ಯತೆ ಇದೆ.