Saturday, October 11, 2025

ಐಪಿಎಸ್ ಅಧಿಕಾರಿ ಪೂರಣ್ ಆತ್ಮಹತ್ಯೆ ಕೇಸ್: ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ನರೇಂದ್ರ ಬಿಜಾರ್ನಿಯಾ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ನರೇಂದ್ರ ಬಿಜಾರ್ನಿಯಾ ಅವರ ಬದಲಾಗಿ ರೋಹ್ಟಕ್‌ನ ಎಸ್‌ಪಿಯಾಗಿ ಸುರೀಂದರ್ ಸಿಂಗ್ ಭೋರಿಯಾ ಅವರನ್ನು ನೇಮಿಸಲಾಗಿದೆ. ಬಿಜಾರ್ನಿಯಾಗೆ ಇದುವರೆಗೆ ಯಾವುದೇ ಹುದ್ದೆ ನೀಡಿಲ್ಲ.

ಪೂರಣ್ ಕುಮಾರ್ ಅವರ ಪತ್ನಿಯಾದ ಐಎಎಸ್ ಅಧಿಕಾರಿ ಅಮ್ನೀತ್ ಪೂರಣ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ರೋಹ್ಟಕ್ ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕಿರುಕುಳ ಮತ್ತು ಪ್ರಚೋದನೆಯ ಆರೋಪ ಹೊರಿಸಿ ದೂರು ದಾಖಲಿಸಲಾಗಿದೆ.

ಪೂರಣ್ ಕುಮಾರ್ ಅವರ ಸೂಸೈಡ್ ನೋಟ್​​ನಲ್ಲಿ ಹೆಸರಿಸಲಾದ ಹಿರಿಯ ಅಧಿಕಾರಿಗಳ ಎಫ್‌ಐಆರ್‌ಗಳು ಮತ್ತು ಬಂಧನಗಳು, ಅವರ ಕುಟುಂಬಕ್ಕೆ ಭದ್ರತೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಅವರು ಒತ್ತಾಯಿಸಿದ್ದಾರೆ. ಅಮ್ನೀತ್ ಅವರ ದೂರಿನ ಮೇರೆಗೆ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

error: Content is protected !!