ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಷ್ಟ್ರವ್ಯಾಪಿ ಹಿಜಾಬ್ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಎರಡನೇ ವ್ಯಕ್ತಿಯನ್ನು ಇರಾನ್ ಗಲ್ಲಿಗೇರಿಸಿದೆ. ಮರಣದಂಡನೆಗೊಳಗಾದ ವ್ಯಕ್ತಿಯನ್ನು ಮಜಿದ್ರೇಜಾ ರಹ್ನವಾರ್ಡ್ ಎಂದು ಗುರುತಿಸಲಾಗಿದೆ.
ನವೆಂಬರ್ 17 ರಂದು ಮಶ್ಹಾದ್‌ನಲ್ಲಿ ಇಬ್ಬರು ಭದ್ರತಾ ಪಡೆಗಳನ್ನು ಇರಿದು ಕೊಂದ ಮತ್ತು ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಮಜಿದ್ರೇಜಾ ರಹ್ನವಾರ್ಡ್ ಅವರನ್ನು ದೋಷಿ ಎಂದು ವರದಿ ತಿಳಿಸಿದೆ.
ಇದಕ್ಕೂ ಮೊದಲು, ಇರಾನ್ ಗುರುವಾರ ಹಿಜಾಬ್ ವಿರೋಧಿ ಪ್ರತಿಬಟನಾಕಾರರ ತೀವ್ರ ವಿರೋಧದ ನಡುವೆ ಬಂಧಿತ ಮೊದಲ ಕೈದಿಯನ್ನು ಗಲ್ಲಿಗೇರಿಸಿತು.
ಇರಾನ್‌ನ ವಿವಾದಾತ್ಮಕ ನೈತಿಕತೆಯ ಪೋಲೀಸರ ಕಸ್ಟಡಿಯಲ್ಲಿ 22 ವರ್ಷದ ಮಹ್ಸಾ ಅಮಿನಿಯ ಮರಣದ ನಂತರ ಪ್ರಾರಂಭವಾದ ಹಿಜಾಬ್ ವಿರೋಧಿ ಪ್ರತಿಭಟನೆಗಳು 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ದೇಶದ ದೇವಪ್ರಭುತ್ವಕ್ಕೆ ಅತ್ಯಂತ ಗಂಭೀರವಾದ ಸವಾಲಾಗಿ ವಿಸ್ತರಿಸಿದೆ.
ಮುಂದಿನ ದಿನಗಳಲ್ಲಿ ಹಲವರನ್ನು ಮರಣದಂಡನೆಗೆ ಒಳಪಡಿಸಬಹುದು ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ, ಇದುವರೆಗೆ ಸುಮಾರು ಹನ್ನೆರಡು ಜನ ಹಿಜಾಬ್ ವಿರೋಧಿ ಪ್ರತಿಭಟನಾಕಾರರು ಮರಣದಂಡನೆಯನ್ನು ಪಡೆದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ