August 16, 2026
Sunday, August 16, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ನಿಂದ ಗುಂಡಿನ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತೆ ತಾರಕ್ಕೇರುವ ಲಕ್ಷಣ ಗೋಚರಿಸುತ್ತಿದ್ದು, ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಮತ್ತೆ ನಿರ್ಬಂಧ ಹೇರಿದ್ದು, ಇದರ ಬೆನ್ನಲ್ಲೇ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಗನ್‌ಬೋಟ್‌ಗಳು ಜಲಸಂಧಿಯಲ್ಲಿ ಸಾಗುತ್ತಿದ್ದ ಭಾರತೀಯ ಎರಡು ತೈಲ ಹಡಗುಗಳ ಮೇಲೆ ದಾಳಿ ನಡೆಸಿವೆ.

ಅದೃಷ್ಟವಶಾತ್‌ ಎರಡೂ ಹಡಗಿನಲ್ಲಿದ್ದ ಯಾವುದೇ ಸಿಬ್ಬಂದಿಗೆ ಗಾಯವಾಗಿಲ್ಲ .ಈ ಬೆನ್ನಲ್ಲೇ ಹಡಗುಗಳು ತಮ್ಮ ದಿಕ್ಕನ್ನು ಬದಲಾಯಿಸಿವೆ ಎಂದು ಹಡಗು ಟ್ರ್ಯಾಕಿಂಗ್ ಸೇವಾ ಸಂಸ್ಥೆ ತಿಳಿಸಿದೆ.

ಅಮೆರಿಕವು ಇರಾನಿನ ಹಡಗು ಸಂಚಾರ ಮತ್ತು ಬಂದರುಗಳ ಮೇಲಿನ ದಿಗ್ಬಂಧನ ಮುಂದುವರಿಸುವುದಾಗಿ ಹೇಳಿದ್ದು, ಇದರ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಗೆ ನಿರ್ಬಂಧ ಹೇರಿದ್ದ ಇರಾನ್ ಮತ್ತೆ ದಾಳಿಯನ್ನು ಮುಂದುವರಿಸಿದೆ.

ಈ ಹಿಂದೆ ಇರಾನ್ ಹೊರಡಿಸಿರುವ ಘೋಷಣೆ ಪ್ರಕಾರ, ಭಾರತಕ್ಕೆ ಹಾರ್ಮುಜ್‌ ಜಲಸಂಧಿ ಮುಕ್ತವಾಗಿದ್ದು, ಆದರೆ ಇದೀಗ ಮತ್ತೆ ಜಲಸಂಧಿಯನ್ನು ಮುಚ್ಚುವ ತನ್ನ ನಿರ್ಧಾರದಲ್ಲಿ ಏನಾದರೂ ಹೊಸ ಬದಲಾವಣೆ ಮಾಡಿದೆಯೇ ಎಂಬುವುದು ಇನ್ನಷ್ಟೇ ಖಚಿತವಾಗಬೇಕಿದೆ.

ಇತ್ತ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಇರಾನ್ ರಾಯಭಾರಿಗೆ ಸಮ್ಸನ್‌ ಜಾರಿ ಮಾಡಿದ ಕೇಂದ್ರ ಸರ್ಕಾರ, ಈ ಕುರಿತು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !