ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಕ್ಲೈಂಬಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಇರಾನ್‌ನ ಮಹಿಳಾ ಅಥ್ಲೀಟ್ ಎಲ್ನಾಜ್ ರೆಕಾಬಿ, ತಮ್ಮ ರಾಷ್ಟ್ರದಲ್ಲಿ ಕಡ್ಡಾಯವಾಗಿರುವ ಹಿಜಾಬ್‌ನ್ನು ಧರಿಸದೆಯೇ ಭಾಗವಹಿಸಿದ ಹಿನ್ನೆಲೆ ಇರಾನ್‌ನಲ್ಲಿ ಅವರ ಬಂಧನವಾಗುವ ಸಾಧ್ಯತೆಗಳಿವೆ ಎಂದು ಕೆಲ ಮಾಧ್ಯಮಗಳು ತಿಳಿಸಿವೆ. ಇರಾನ್ ಈ ವರದಿಯನ್ನು ತಳ್ಳಿ ಹಾಕಿದ್ದು, ರೆಕಾಬಿ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ತಿಳಿಸಿದೆ.