ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ವಿರುದ್ಧ ಗುಡುಗಿದ್ದು, ಜಾಗತಿಕ ಮಟ್ಟದಲ್ಲಿ ಕುರಾನ್ ಅಡಿಯಲ್ಲಿ ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.
ತೆಹ್ರಾನ್ ನ ಇಮಾಮ್ ಖೊಮೇನಿ ಮೊಸಲ್ಲಾ ಮಸೀದಿಯಲ್ಲಿ ಭಾಷಣ ಮಾಡಿರುವ ಅಯತೊಲ್ಲಾ,ಪ್ಯಾಲೇಸ್ಟಿನಿಯನ್ ರಾಜ್ಯ, ಲೆಬನಾನ್ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಶತ್ರುವೇ ಇರಾನ್‌ನ ಶತ್ರು ಆಗಿದೆ ಎಂದು ಅವರು ಹೇಳಿದ್ದಾರೆ.
2020 ರಲ್ಲಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಇರಾನ್ ಜನರಲ್ ಖಾಸಿಮ್ ಸೊಲೈಮಾನಿ ಸಾವನ್ನಪ್ಪಿದ ನಂತರ ಮತ್ತು ಇರಾಕ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಖಮೇನಿ ಇತ್ತೀಚೆಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ್ದರು. 2012ರಲ್ಲಿ ಅದಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸಿದ್ದರು.
ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಮೇನಿ ಶ್ಲಾಘಿಸಿದ್ದಾರೆ ಮತ್ತು ಅದನ್ನು ಸಂಪೂರ್ಣವಾಗಿ ‘ಕಾನೂನು ಬದ್ಧ’ ಎಂದು ಹೇಳಿದ್ದಾರೆ. ಇರಾನ್ ದಾಳಿ ಅಪರಾಧಗಳ ವಿರುದ್ಧ ಕನಿಷ್ಠ ಶಿಕ್ಷೆ ಎಂದು ಅವರು ಖೊಮೇನಿ ಹೇಳಿದ್ದಾರೆ.