ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದಲ್ಲಿ ಕಟ್ಟುನಿಟ್ಟಾದ ಹಿಜಾಬ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿ ಎಂಬ ಯುವತಿಯನ್ನು ಬಂಧಿಸಿ ಕೊಂದ ಬಳಿದ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆಗಳಿಗೆ 2 ತಿಂಗಳ ಬಳಿಕ ಮಣಿದಿರುವ ಇರಾನ್ ಸರ್ಕಾರ ತನ್ನ ʼನೈತಿಕ ಪೊಲೀಸ್ ಪಡೆʼಯನ್ನು ರದ್ದುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೆಪ್ಟೆಂಬರ್ 16 ರಂದು ಕುರ್ದಿಷ್ ಮೂಲದ 22 ವರ್ಷದ ಯುವತಿ ಇರಾನಿನ ಮರಣಹೊಂದಿದಾಗಿನಿಂದ ಮಹಿಳೆಯರ ನೇತೃತ್ವದ ಪ್ರತಿಭಟನೆಗಳು ಇರಾನ್ ಅನ್ನು ಆವರಿಸಿದೆ. “ಇನ್ನು ಮುಂಎ ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ” ಮತ್ತು ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆ.
ಈ ನೈತಿಕ ಪೊಲೀಸರನ್ನು ಮಹಿಳೆಯರಿಗೆ ಮಾರ್ಗದರ್ಶನ ಮತ್ತು ಹಿಜಾಬ್ ಸಂಸ್ಕೃತಿಯನ್ನು ಹರಡಲು” ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ 2006 ರಲ್ಲಿ ಸ್ಥಾಪಿಸಿದ್ದರು., ಇದು ಸ್ತ್ರೀಯರ ತಲೆಯ ಮೇಲೆ ಕಡ್ಡಾಯ ಹೊದಿಕೆ (ಹಿಜಾಬ್) ಹಾಕಿರದಿದ್ದರೆ ಶಿಕ್ಷಿಸುತ್ತಿತ್ತು. ಇರಾನ್ ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ದಥಾಪನೆಯಾದ 1979 ರ ಕ್ರಾಂತಿಯ ನಂತರ ನಾಲ್ಕು ವರ್ಷಗಳ ನಂತರ ಹಿಜಾಬ್ ಕಡ್ಡಾಯವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ