ತಾಂತ್ರಿಕ ದೋಷದಿಂದ ಸಿಗದ ಐಆರ್‌ಸಿಟಿಸಿ ಸೇವೆ: ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆನ್‌ಲೈನ್‌ ನಲ್ಲಿ ರೈಲ್ವೆ ಟಿಕೆಟ್‌ ಬುಕಿಂಗ್‌ ಸೇವೆ ಒದಗಿಸುವ ಐಆರ್‌ಸಿಟಿಸಿ ವೆಬ್‌ಸೈಟ್‌ ತಾಂತ್ರಿಕ ದೋಷದಿಂದಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಐಆರ್‌ಸಿಟಿಸಿ ಟ್ವೀಟ್‌ ಮಾಡಿದ್ದು, ʼತಾಂತ್ರಿಕ ದೋಷಗಳಿಂದಾಗಿ ಪ್ರಸ್ತುತ ರೈಲ್ವೆ ಟಿಕೆಟ್‌ ಬುಕಿಂಗ್ ಸೇವೆ ಲಭ್ಯವಿಲ್ಲ. ಐಆರ್‌ಸಿಟಿಸಿ ತಂಡವು ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರು ಇತರೆ ಆಪ್‌ಗಳನ್ನು ಬಳಸಿ ಟಿಕೆಟ್‌ ಬುಕಿಂಗ್‌ ಮಾಡಿಕೊಳ್ಳಬಹುದುʼ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!