ಎರಡು ಬಾರಿಯ ಚಾಂಪಿಯನ್‌ ವಿಂಡೀಸ್ ‌ತಂಡವನ್ನು ವಿಶ್ವಕಪ್‌ ನಿಂದ ಹೊರದಬ್ಬಿದ ಐರ್ಲೆಂಡ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ಗೆ ಶರಣಾಗುವ ಮೂಲಕ 2 ಬಾರಿಯ ಚಾಂಪಿಯನ್‌ ತಂಡ ವೆಸ್ಟ್ ಇಂಡೀಸ್ ಈ ಬಾರಿಯ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ.
ಹೊಸಬರ ತಂಡ, ಆಯ್ಕೆಯಲ್ಲಿ ವಿವಾದ, ಒಳಜಗಳ ನಡುವೆಯೇ ಟೂರ್ನಿಗೆ ಎಂಟ್ಟಿ ಕೊಟ್ಟಿದ್ದ ವಿಂಡೀಸ್ ತಂಡದ ಅರ್ಹತಾ ಸುತ್ತಿನಲ್ಲಿ ತನಗಿಂದ ಕೆಳ ಕ್ರಮಾಂಕದ ತಂಡದ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿದೆ. ವಿಂಡೀಸ್ ತಂಡವನ್ನು ಮಣಿಸಿದ ಐರ್ಲೆಂಡ್ ತಂಡ ಟಿ20 ವಿಶ್ವಕಪ್ ಮುಖ್ಯ ಸುತ್ತಿಗೆ ಪ್ರವೇಶಿಸಿದೆ.
ಹೋಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ‌ ಕೇವಲ 146 ರನ್​ ಗಳನ್ನಷ್ಟೇ ಕಲೆಹಾಕುವಲ್ಲಿ ಶಕ್ತವಾಯಿತು. ವಿಂಡೀಸ್‌ ಪರ ಬ್ರಾಂಡನ್ ಕಿಂಗ್ (ಅಜೇಯ 62) ಏಕಾಂಗಿ ಹೋರಾಟ ನಡೆಸಿದ್ದನ್ನು ಹೊರತುಪಡಿಸಿದರೆ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ ಜವಾಬ್ದಾರಿ ಅರಿತು ಆಡಲಿಲ್ಲ. ಆರಂಭಿಕ ಕೈಲ್ ಮೇಯರ್ಸ್ 1 ರನ್, ಜೋನಾಥನ್ ಚಾರ್ಲ್ಸ್ 24, ಎವಿನ್ ಲೂಯಿಸ್ 13, ನಾಯಕ ಪೂರನ್ 13 ದಯನೀಯ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ವಿಂಡೀಸ್‌ ಐರ್ಲೆಂಡ್‌ ಗೆ 146 ರನ್‌ಗಳ ಗುರಿ ನೀಡಿತು. ಐರ್ಲೆಂಡ್ ಪರ ತಂಡದ ಲೆಗ್ ಸ್ಪಿನ್ನರ್ ಡೆಲಾನಿ 4 ಓವರ್​ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ ಐರ್ಲೆಂಡ್‌ ತMಡಕ್ಕೆ ಪೌಲ್ ಸ್ಟಿರ್ಲಿಂಗ್ 48 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ ಅಜೇಯ 66 ರನ್ ಗಳಿಸಿ ಗೆಲುವು ತಂಡುಕೊಟ್ಟರು.ಐರ್ಲೆಂಡ್ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್‌ ಕಳೆದುಕೊಂಡು 147 ರನ್‌ಗಳ ಗುರಿ ಬೆನ್ನಟ್ಟಿತು. ನಾಯಕ ಬಲ್ಬಿರ್ನಿ 23 ಎಸೆತಗಳಲ್ಲಿ 37 ರನ್, ಲೋರ್ಕನ್ ಟಕರ್‌ 35 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 45 ರನ್ ಗಳಿಸಿ ಐತಿಹಾಸಿಕ ಗೆಲುವು ತಂದು ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!