8 ವರ್ಷದ ಬಳಿಕ ಮೊದಲ ಬಾರಿಗೆ ಮಡದಿಯ ಮುಖ ತೋರಿಸಿದ ಇರ್ಫಾನ್ ಪಠಾಣ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತಮ್ಮ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಸಫಾ ಬೇಗ್ ಅವರೊಂದಿಗೆ ಆಚರಿಸಿಕೊಂಡಿದ್ದು,ಈ ವೇಳೆ ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಅವರು ಮೊದಲ ಬಾರಿಗೆ ಫರ್ದಾ ತೆಗೆದು ಚಿತ್ರವನ್ನು ತೆಗಿಸಿಕೊಂಡಿದ್ದಾರೆ.

ಈ ಫೋಟೋ ಇದೀಗ ಸಖತ್​​ ವೈರಲ್​​ ಆಗಿದೆ.

ಇರ್ಫಾನ್ ಪಠಾಣ್​ ಪತ್ನಿ ಸಫಾ ಬೇಗ್ ಇದುವರೆಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಪ್ರತಿ ಚಿತ್ರದಲ್ಲೂ ಬುರ್ಖಾ ಧರಿಸಿಕೊಂಡಿರುತ್ತಿದ್ದರು. ಇದೀಗ ಮೊದಲ ಬಾರಿಗೆ ಪತಿಯೊಂದಿಗೆ ಬುರ್ಖಾ ಹಾಗೂ ಫರ್ದಾ ರಹಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಠಾಣ್ ಅವರು ತಮ್ಮ ಪತ್ನಿಯೊಂದಿಗೆ ಸುಂದರವಾದ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಪ್ರೀತಿಯಿಂದ ಟಿಪ್ಪಣಿಯನ್ನು ಬರೆದಿದ್ದಾರೆ. ಮನಸ್ಸು ಉಲ್ಲಾಸ ಮಾಡುವವರು, ಹಾಸ್ಯ ಮಾತಿನವರು, ತೊಂದರೆ ನೀಡುವವರು ಮತ್ತು ನನ್ನ ಮಕ್ಕಳ ನಿರಂತರ ಒಡನಾಡಿ, ನನ್ನ ಸ್ನೇಹಿತೆ ಮತ್ತು ಆತ್ಮ. ಈ ಸುಂದರ ಪ್ರಯಾಣದಲ್ಲಿ, ನನ್ನ ಹೆಂಡತಿಯಾಗಿ ಅಪಾರವಾಗಿ ಪ್ರೀತಿಸುತ್ತೇನೆಎಂದು ಪಠಾಣ್ ತಚಿತ್ರವನ್ನು ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ಪಠಾಣ್ ಈ ಹಿಂದೆ ತನ್ನ ಹೆಂಡತಿಯೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಅವಳ ಮುಖವನ್ನು ಮರೆಮಾಚಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!