ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಡಿ ಸಿನಿಮಾದ ಸರ್ಸೆ ಸೆರಗ ಹಾಡು ವಿವಾದಕ್ಕೀಡಾದ ಬೆನ್ನಲ್ಲೇ ಸಿಂಗರ್ ಐಶ್ವರ್ಯಾ ರಂಗರಾಜನ್ ಇನ್ಸ್ಟ್ರಾಗ್ರಾಮ್ ಖಾತೆ ಡಿಲೀಟ್ ಆಗಿದೆ.
ಹೌದು, ಈ ಹಾಡಿಗೆ ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಿದ್ದು, ಹಾಡನ್ನು ಬರೆದ ನಟ, ನಿರ್ದೇಶಕ ಪ್ರೇಮ್ ಕೂಡ ಇಡೀ ಹಾಡನ್ನು ಬದಲಾಯಿಸುತ್ತೇನೆ ಎಂದಿದ್ದಾರೆ.
ಈ ಹಾಡನ್ನು ಹಾಡಿದವರಿಗೆ, ಬರೆದವರಿಗೆ, ನಟಿಸಿದವರಿಗೆ ಸಾಕಷ್ಟು ಕೆಟ್ಟ ಕಮೆಂಟ್‌ಗಳು ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಇನ್ಸ್ಟಾ ಖಾತೆ ಡಿ ಆಕ್ಟಿವೇಟ್ ಮಾಡಿರುವ ಸಾಧ್ಯತೆ ಇದೆ. ಈ ವಿವಾದ ಸ್ವಲ್ಪ ತಣ್ಣಗಾದ ನಂತರ ಮತ್ತೆ ವಾಪಾಸ್ ಬರುವ ಸಾಧ್ಯತೆ ಇದೆ.



