ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟರ್ ಯಜುವೇಂದ್ರ ಚಹಾಲ್ ಹಾಗೂ ನಟಿ ಧನಶ್ರೀ ಡಿವೋರ್ಸ್ ಪಡೆದುಕೊಂಡಿದ್ದಾರೆ. ಡಿವೋರ್ಸ್ ದಿನವೇ ಧನಶ್ರೀ ಹಾಡೊಂದನನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪತಿ ಅಫೇರ್ ಇಟ್ಟುಕೊಂಡಿದ್ದಾನೆ. ಈ ಹಾಡು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಚಹಾಲ್ ಚೀಟ್ ಮಾಡಿದ್ರಾ ಅನ್ನೋ ಅನುಮಾನಗಳು ಕಾಡಿವೆ.
ಧನಶ್ರೀ ಅವರು ಡ್ಯಾನ್ಸರ್. ಚಾಹಲ್ ಅವರು ಡ್ಯಾನ್ಸ್ ಕಲಿಯಲು ಹೋದಾಗ ಇವರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಡೇಟಿಂಗ್ ಆರಂಭಿಸಿದ ಅವರು ಬಳಿಕ ಅದ್ದೂರಿಯಾಗಿ ಮದುವೆ ಆದರು. ಇವರು ಬೇರೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಈಗ ಇವರ ವಿಚ್ಛೇದನಕ್ಕೆ ಕೋರ್ಟ್ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇವರು ಅಧಿಕೃತವಾಗಿ ಬೇರೆ ಆಗಿದ್ದಾರೆ. ಇವರು ಬೇರೆ ಆಗುತ್ತಿದ್ದಂತೆ ‘ಟಿ-ಸೀರಿಸ್’ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋ ಸಾಂಗ್ ಒಂದು ರಿಲೀಸ್ ಆಗಿದೆ.
‘ದೇಖಾ ಜಿ ದೇಖಾ ಮೇನೆ..’ ಅನ್ನೋದು ಹಾಡಿನ ಹೆಸರು. ಈ ವಿಡಿಯೋ ಸಾಂಗ್ನಲ್ಲಿ ಧನಶ್ರೀ ವರ್ಮಾ, ಇಶ್ವಕ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನಶ್ರೀ ಹಾಗೂ ಇಶ್ವಕ್ ಮದುವೆ ಆಗಿರುತ್ತಾರೆ. ಆದರೆ, ಇಶ್ವಕ್ಗೆ ಅನೈತಿಕ ಸಂಬಂಧ ಇರೋದು ಧನಶ್ರೀ ಗಮನಕ್ಕೆ ಬರುತ್ತದೆ. ಸಾಕಷ್ಟು ಸಹಿಸಿಕೊಳ್ಳುವ ಅವರು ಕೊನೆಯಲ್ಲಿ ವಿಚ್ಛೇದನದ ನಿರ್ಧಾರ ಮಾಡುತ್ತಾರೆ. ಈ ರೀತಿಯಲ್ಲಿ ಹಾಡು ಇದೆ. ಜ್ಯೋತಿ ನೂರಾನ್ ಈ ಹಾಡನ್ನು ಹಾಡಿದ್ದು, ಜಾನಿ ಸಂಗೀತ ಸಂಯೋಜನೆ ಮಾಡಿ ಸಾಹಿತ್ಯ ಬರೆದಿದ್ದಾರೆ.
Some truths reveal themselves, no matter how well they’re hidden 🤐 #DekhJiDekhaMainehttps://t.co/ky0Je7270B#tseries @TSeries #BhushanKumar @dhanshreeverma9 @ishwaksingh @yourjaani @jyotinooran #Bunny @DhruwalPatel #JigarMulani pic.twitter.com/xVQajvDcr7
— T-Series (@TSeries) March 20, 2025