October 9, 2026
Friday, October 9, 2026
spot_img

ನಟಿ ಮೇಧಾ ಶಂಕರ್‌ ಜೊತೆ ಕಮೀಡಿಯನ್‌ ಸಮಯ್‌ ರೈನಾ ಡೇಟಿಂಗ್‌? ಪ್ರೂಫ್‌ ಇದೆ ಅಂತಿದ್ದಾರೆ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೇಮಸ್‌ ಕಮಿಡಿಯನ್‌ ಸಮಯ್‌ರೈನಾ ಹಾಗೂ ನಟಿ ಮೇಧಾ ಶಂಕರ್‌ ಡೇಟಿಂಗ್‌ ವದಂತಿ ಹಬ್ಬಿದೆ. ಇತ್ತೀಚೆಗೆ ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದ್ದು, ಇದು ಬರೀ ಫ್ರೆಂಡ್‌ಶಿಪ್‌ ಆಗಿರೋಕೆ ಸಾಧ್ಯವೇ ಇಲ್ಲ ಅಂತಿದ್ದಾರೆ.

ಇತ್ತೀಚೆಗೆ ನೆಟ್ಟಿಗರೊಬ್ಬರು ಇವರಿಬ್ಬರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸಮಯ್ ಮತ್ತು ಮೇಧಾ ಒಂದೇ ಕಡೆ ಒಟ್ಟಿಗೆ ಇದ್ದರು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಅಲ್ಲಿ ಕ್ಯಾಮೆರಾ ಕಣ್ಣುಗಳು ಅಂದರೆ ಪ್ಯಾಪರಾಜಿಗಳು ಕಾಣಿಸುತ್ತಿದ್ದಂತೆ ಇಬ್ಬರೂ ಬೇರೆ ಬೇರೆಯಾಗಿ ನಡೆದಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಬಾರದು ಎಂದು ಅವರು ಹೀಗೆ ಮಾಡಿದ್ದಾರೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಇವರಿಬ್ಬರು ಈ ಹಿಂದೆಯೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿದೆ.

Must Read