ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನಲೆಯಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ BJP ‘ಸೌಗತ್-ಎ-ಮೋದಿ’ ಅಭಿಯಾನದಡಿ ಈದ್ ಕಿಟ್ ವಿತರಿಸಾಲು ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ʻಸೌಗಾದ್ ಎ ಮೋದಿʼ ಹೆಸರಿನಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? ಎಂದು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವರ ಮಕ್ಕಳು ಎಸಿ ರೂಮಲ್ಲಿ ಕೂತಿರ್ತಾರೆ. ಹೊರಗಡೆ ಬೇರೆಯವರು ಮಾತ್ರ ಹೋರಾಟ ಮಾಡಬೇಕು ಅಂತಾ ಬಿಜೆಪಿ ವಿರುದ್ಧ ಕಿಡಿಕಾರಿದರು.
ಉತ್ತರ ಪ್ರದೇಶ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಮುಸ್ಲಿಮರನ್ನ ಒಬಿಸಿಗೆ ಸೇರಿಸಿದ್ದಾರೆ. ಧಾರ್ಮಿಕ ಆಧಾರದ ಮೀಸಲಾತಿ ಎನ್ನುವ ಬಿಜೆಪಿಯವರಿಗೆ ಏನಾದರೂ ಕಾಮನ್ ಸೆನ್ಸ್ ಇದ್ಯಾ ಸ್ವಲ್ಪನಾದ್ರು ಸಾಮಾನ್ಯ ಪ್ರಜ್ಞೆ ಇದೆಯಾ? ನಾಲ್ಕು ಕಮಿಷನ್ಗಳು ಮುಸ್ಲಿಮರಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿವೆ. ಮುಸ್ಲಿಮರು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಶಿಫಾರಸು ಮಾಡಿದೆ. ನಾಲ್ಕು ಕಮಿಷನ್ಗಳ ಅಧ್ಯಕ್ಷರು ಮುಸಲ್ಮಾನರಾ? ಹಿಂದುಗಳಲ್ವಾ? 4% ಪರ್ಸೆಂಟ್ ಮೀಸಲಾತಿಯನ್ನ ಎಸ್ಸಿ, ಎಸ್ಟಿ ಕೆಟಗೆರಿಗೆ 1, ಕೆಟಗರಿ 2ಕ್ಕೆ ನೀಡಿದ್ವಿ. ಅದನ್ನ ಮುಸ್ಲಿಮರಿಗೆ ವಿಸ್ತರಣೆ ಮಾಡುತ್ತಿದ್ದೇವೆ. ಇದು ಧಾರ್ಮಿಕ ಆಧಾರದ ಮೀಸಲಾತಿ ಹೇಗಾಗುತ್ತದೆ? ಅಂತ ಪ್ರಶ್ನೆ ಮಾಡಿದರು.