HEALTH | ಜೋಳದ ರೊಟ್ಟಿ ತಿನ್ನೋ ಅಭ್ಯಾಸವೇ ಇಲ್ವಾ? ಶುಗರ್‌ ಕಂಟ್ರೋಲ್‌ಗೆ ಬೆಸ್ಟ್‌ ಆಪ್ಷನ್‌ ಇದು

ಜೋಳದ ರೊಟ್ಟಿ ಮಾಡಿ ತಿನ್ನೋ ಅಭ್ಯಾಸ ಇಲ್ವಾ? ಇಲ್ಲದಿದ್ರೂ ಪರವಾಗಿಲ್ಲ. ಇಂದೇ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ.

ಹೇಗೆ ಮಾಡೋದು ನೋಡಿ?

ಮೊದಲು ಬಾಣಲೆಗೆ ನೀರು ಹಾಗೂ ಉಪ್ಪು ಹಾಕಿ ಕುದಿಸಿ
ಅನ್ನ ಉಳಿದಿದ್ದರೆ ಅನ್ನವನ್ನೂ ನೀರಿಗೆ ಹಾಕಬಹುದು
ನಂತರ ಅದಕ್ಕೆ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್‌ ಮಾಡಿ
ಅದು ಸ್ವಲ್ಪ ಬಿಸಿ ಇದ್ದಾಗಲೇ ಕೈಯಲ್ಲಿ ಚೆನ್ನಾಗಿ ನಾದಿ ಹಿಟ್ಟಿನ ಉಂಡೆಗಳನ್ನು ಮಾಡಿ
ನಂತರ ಲಟ್ಟಿಸಿ ಬೇಯಿಸಿದ್ರೆ ರೊಟ್ಟಿ ರೆಡಿ

ಇದನ್ನು ತಿನ್ನೋದ್ರಿಂದ ಲಾಭ ಏನು?

ವಿಶೇಷವಾಗಿ ಜೋಳದ ರೊಟ್ಟಿ ಮಧುಮೇಹಿಗಳಿಗೆ ಒಳ್ಳೆಯ ಆಹಾರ. ಇದರ ಕಡಿಮೆ ಗ್ಲೈಸೆಮಿಕ್ ಗುಣದಿಂದಾಗಿ ಗ್ಲೂಕೋಸ್ ಮಟ್ಟಗಳು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಶುಗರ್​ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಇನ್ಸುಲಿನ್ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಉಪಯುಕ್ತವಾಗಿದೆ. ಜೋಳದಲ್ಲಿ ನಾರಿನಂಶ ಹೆಚ್ಚಿದ್ದು, ಇದು ಅತಿಯಾದ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಸ್ವಲ್ಪ ತಿಂದರೂ ಹೊಟ್ಟೆ ತುಂಬುತ್ತದೆ.

ಜೋಳದಲ್ಲಿ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಕಲ್ಮಶಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹಾಗೂ ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಜೋಳವನ್ನು ಪ್ರತಿದಿನ ಸೇವನೆ ಮಾಡುವುದರಿಂದ ನೀವು ಆ್ಯಕ್ಟಿವ್​ ಆಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಹಲವು ಗುಣಗಳನ್ನು ಜೋಳವು ಹೊಂದಿದೆ. ಜೋಳವು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಕರುಳನ್ನು ಆರೋಗ್ಯಕ್ಕೆ ಉತ್ತಮವಾಗಿದೆ.

ಜೋಳದ ರೊಟ್ಟಿಯಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ ಯಂತಹ ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡುವಲ್ಲಿ ಹಾಗೂ ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಪೂರಕವಾದ ಪಾತ್ರ ವಹಿಸುತ್ತದೆ. ಮೆಗ್ನೀಸಿಯಮ್ ಹಾಗೂ ಕ್ಯಾಲ್ಸಿಯಂನಂತಹ ಖನಿಜಗಳು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಮೂಳೆ ಸಂಬಂಧಿತ ಕಾಯಿಲೆಗಳು, ಇತರೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಆದರೆ, ಜೋಳದ ರೊಟ್ಟಿಯು ಆರೋಗ್ಯಕರವಾಗಿದೆ, ಆದ್ರೆ, ಇದನ್ನು ಎಣ್ಣೆಯಲ್ಲಿ ಹಚ್ಚಿ ಬೇಯಿಸಬಾರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!