ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಕ್ರಿಕೆಟ್‌ನಲ್ಲಿ ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್‌ಕೆ, ಕುರಿತು ತಂಡದ ಮಾಜಿ ಆಟಗಾರ ಅಂಬಟಿ ರಾಯಡು ಹೇಳಿಕೆಯೊಂದನ್ನು ನೀಡಿದ್ದಾರೆ.
ಸಿಎಸ್‌ಕೆ ತಂಡ ಇನ್ನು ಮುಂದೆ ಚೇತರಿಸಿಕೊಳ್ಳುವುದು ಕಷ್ಟ. ಸಿಎಸ್‌ಕೆ ಆಟದಲ್ಲಿ ಆಸಕ್ತಿ ಕಡಿಮೆಯಾಗಿದೆ. ನೀವು ಒಂದು ಪಂದ್ಯವನ್ನು ಸೋತರೂ ಹೋರಾಡಿ ಸೋಲಬೇಕು. ಒಂದು ಹಂತವನ್ನು ಕೇವಲ ದಾಟಲು ಪ್ರಯತ್ನಿಸಿ, ಕೊನೆಯಲ್ಲಿ ಗೆಲ್ಲಬಹುದು ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಟಿ, ಈ ಋತುವಿನಲ್ಲಿ ಸಿಎಸ್‌ಕೆ ಮತ್ತೆ ಕಮ್‌ಬ್ಯಾಕ್ ಮಾಡುತ್ತದೆ ಎಂದು ನನಗೆ ತಿಳಿದಿಲ್ಲ. ಧೋನಿ ಕೂಡ ಪಂದ್ಯದ ನಂತರ ಅದನ್ನೇ ಹೇಳಿದರು. ಅವರು ಮುಂದಿನ ಋತುವಿನತ್ತ ಸಾಗುತ್ತಿದ್ದಾರೆ. ಹೊಸ ಯುವ ಆಟಗಾರರಿಗೆ ಅವಕಾಶ ನೀಡಿ ಅವರ ಪ್ರತಿಭೆಯನ್ನು ಹೊರತರಲು ಬಯಸುತ್ತಿದ್ದಾರೆ. ಆದರೆ ಸಿಎಸ್‌ಕೆಗೆ ಸಕಾರಾತ್ಮಕ ಆಟದ ಅಗತ್ಯವಿದೆ ಎಂದರು.