ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಬಳಿಕ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಕಾಶ್ಮೀರಕ್ಕೆ ಇಂದು ಮೊದಲ ಭೇಟಿ ನೀಡಿದ್ದು, ಪಾಪಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಪಾಕಿಸ್ತಾನದ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಸುರಕ್ಷಿತವೇ ಎಂದು ವಿಶ್ವ ನಾಯಕರಿಗೆ ಗುರುವಾರ ಪ್ರಶ್ನೆ ಮಾಡಿದ್ದಾರೆ.
ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಮಾಣು ಅಣ್ವಸ್ತ್ರಗಳನ್ನು ನಿರ್ವಹಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ಟೀಕಿಸಿದರು. ಪಾಕಿಸ್ತಾನದಂತಹ ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಅಣ್ವಸ್ತ್ರ ಇರುವುದು ಸುರಕ್ಷಿತವಾಗಿವೆಯೇ ಎಂದು ಪ್ರಶ್ನೆ ಮಾಡಿದರು.
ನಮ್ಮ ಸೇನೆ ಹೊಂದಿರುವ ಗುರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞೆ ಮಾಡಿದ್ದು, ಅದು ಎಷ್ಟು ದೃಢವಾಗಿದೆ ಎಂದರೆ ನಾವು ಪರಮಾಣು ಬೆದರಿಕೆ ಬಗ್ಗೆಯೂ ತಲೆ ಕೆಡಿಕಿಕೊಳ್ಳುವುದಿಲ್ಲ. ಪಾಕಿಸ್ತಾನ ಎಷ್ಟು ಬೇಜವಾಬ್ದಾರಿಯಿಂದ ಬೆದರಿಕೆ ಹಾಕಿದೆ ಎಂಬುವುದನ್ನು ಇಡೀ ಜಗತ್ತು ನೋಡಿದೆ. ಆದರೆ ಇಂದು ಆ ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಇರುವುದು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಎಂದರು.