ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಪತ್ತೆ: ಅಧಿಕಾರಿಗಳು ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿಯ ಹೊಲದಲ್ಲಿ ಡ್ರೋನ್ ಪತ್ತೆಯಾಗಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 9.45ರ ಸಮಯದಲ್ಲಿ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು. ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅನುಪ್‌ಗಢ ಸ್ಟೇಷನ್ ಹೌಸ್ ಆಫೀಸರ್ (SHO) ಈಶ್ವರ್ ಜಂಗಿದ್ ಅವರು ತಕ್ಷಣ ಗಡಿ ಭದ್ರತಾ ಪಡೆ (BSF)ಗೆ ಮಾಹಿತಿ ನೀಡಿ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಬಿಎಸ್​ಎಫ್ ವಶಕ್ಕೆ ಪಡೆದಿರುವ ಡ್ರೋನ್ 5ರಿಂದ 7 ಅಡಿ ಉದ್ದವಿದ್ದು ಬಹುತೇಕ ಹಾನಿಗೊಳಗಾಗಿದೆ.

ಅಂತಾರಾಷ್ಟ್ರೀಯ ಗಡಿಯಲ್ಲಿರುವ ಶ್ರೀ ಗಂಗಾನಗರದ ಆಯಕಟ್ಟಿನ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಡ್ರೋನ್ ಅನ್ನು ಗಡಿಯಾಚೆಯಿಂದ ಕಳುಹಿಸಲಾಗಿದೆಯೇ ಅಥವಾ ಮಿಲಿಟರಿ ಚಟುವಟಿಕೆಯ ಸಮಯದಲ್ಲಿ ಅದು ದಾರಿ ತಪ್ಪಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!