ಆಫೀಸ್‌ಗೆ ಬನ್ನಿ ಎಂದಿದ್ದೇ ತಪ್ಪಾಯ್ತಾ? ಸಾಕಷ್ಟು ಅಮೆಜಾನ್ ಉದ್ಯೋಗಿಗಳಿಂದ ರಾಜೀನಾಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫೀಸಿನಲ್ಲಿ ಮಾಡುವಷ್ಟೇ ಕೆಲಸ ಮನೆಯಲ್ಲೂ ಮಾಡಬಹುದು ಎಂದು ಗೊತ್ತಾಗಿದ್ದೇ ತಡ ಉದ್ಯೋಗಿಗಳಿಗೆ ಆಫೀಸ್‌ಗೆ ಹೋಗೋದಕ್ಕೆ ಇಷ್ಟವೇ ಇಲ್ಲ!

ಹೌದು, ದೈತ್ಯ ಕಂಪನಿ ಅಮೇಜಾನ್ ಆಫೀಸ್‌ಗೆ ಬನ್ನಿ ಎಂದು ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಿದ್ದೇ ತಡ ಸಾಕಷ್ಟು ಉದ್ಯೋಗಿಗಳು ಕೆಲಸಕ್ಕೆ ರಿಸೈನ್ ಮಾಡಿದ್ದಾರೆ.

ಅಮೆರಿಕದಲ್ಲಿ ಅಮೆಜಾನ್ ಸೆಂಟ್ರಲ್ ಹಬ್‌ಗೆ ಬಂದು ಕೆಲಸ ಮಾಡುವಂತೆ ಸೂಚನೆ ನೀಡಿದೆ, 2014ರ ಮಧ್ಯಭಾಗದವರೆಗೂ ಮನೆಯಿಂದ ಕೆಲಸ ಮಾಡಿ ತದನಂತರ ಆಫೀಸ್‌ಗೆ ಬನ್ನಿ ಎಂದು ಕಂಪನಿ ಹೇಳಿದೆ. ಆದರೆ ಅದಕ್ಕೂ ರೆಡಿಯಾಗದ ಉದ್ಯೋಗಿಗಳು ರಿಸೈನ್ ಮಾಡ್ತೀವಿ ಆದರೆ ಆಫೀಸ್‌ಗೆ ಬರೋದಿಲ್ಲ ಎನ್ನುತ್ತಿದ್ದಾರೆ.

ಮನೆಯಲ್ಲಿ ಫ್ಲೆಕ್ಸಿಬಲ್ ಆಗಿ ಕೆಲಸ ಮಾಡಬಹುದು, ಫ್ರೀ ಆದಾಗ ನಮಗೆ ಇಷ್ಟಬಂದಂತೆ ಸಮಯ ಕಳೆಯಬಹುದು, ಯಾವ ಫಂಕ್ಷನ್ ಕೂಡ ಮಿಸ್ ಮಾಡಿಕೊಳ್ಳದೆ ವರ್ಕ್ ಫ್ರಮ್ ಹೋಮ್ ಮಾಡಬಹುದು. ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯಬಹುದು, ಮಕ್ಕಳಿಗೆ ಸಮಯ ನೀಡಬಹುದು ಎನ್ನುವುದು ಉದ್ಯೋಗಿಗಳ ವಾದವಾಗಿದೆ.

ಯಾವುದೋ ಏರಿಯಾದಲ್ಲಿ ಮನೆ ಮಾಡಿಕೊಂಡು ಸೆಟಲ್ ಆದವರಿಗೆ ಆಫೀಸ್ ದೂರ ಆಗುತ್ತದೆ, ಮತ್ತೆ ಮನೆ ಬದಲಾಯಿಸಬೇಕು. ಟ್ರಾವೆಲ್‌ಗೆ ದುಡ್ಡ ಖರ್ಚು, ಅಲ್ಲದೇ ಬೇರೆ ಕಂಪನಿಗಳು ವರ್ಕ್ ಫ್ರಂ ಹೋಮ್ ಆಫರ್ ಮಾಡುತ್ತಿರುವುದರಿಂದ ಅಮೆಜಾನ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.

ಆದರೆ ಕಂಪನಿಯ ದೊಡ್ಡ ಹುದ್ದೆಯಲ್ಲಿರುವ ಸಿಬ್ಬಂದಿ ಮಾತ್ರ ಆಫೀಸ್‌ನಲ್ಲಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಟೀಮ್ ಚೆನ್ನಾಗಿ ಇರುತ್ತದೆ ಹಾಗಾಗಿ ಆಫೀಸ್‌ಗೆ ಬರಬೇಕು ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!