ರಾಜ್ಯಗಳ ಹಕ್ಕುಗಳಿಗೆ ಹೋರಾಟ ನಡೆಸುವುದೇ ತಪ್ಪೆ?: ಎಂ.ಕೆ.ಸ್ಟಾಲಿನ್‌ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವು ವಿಷಯಗಳಲ್ಲಿ ತಕರಾರು ತೆಗೆಯುವ ಮೂಲಕ ಆಡಳಿತ ಪಕ್ಷ ಡಿಎಂಕೆ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಳ್ಳಿಹಾಕಿದ್ದಾರೆ.

ನೀಟ್‌, ತ್ರಿಭಾಷಾ ಸೂತ್ರ, ವಕ್ಫ್‌ ತಿದ್ದುಪಡಿ ಕಾಯ್ದೆ ಅಥವಾ ಕ್ಷೇತ್ರ ಮರುವಿಂಗಡಣೆ ಹೀಗೆ ರಾಜ್ಯಗಳಿಗೆ ಬಾಧಕವಾಗುವ ವಿಷಯಗಳಿಗೆ ಸಂಬಂಧಿಸಿ ತಮಿಳುನಾಡು ಸ್ಪಷ್ಟವಾಗಿ ವಿರೋಧ ಮಾಡುತ್ತಿದೆ.

ತಮಿಳುನಾಡು ಎಲ್ಲ ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಹಾಗಿದ್ದರೆ, ರಾಜ್ಯಗಳ ಹಕ್ಕುಗಳಿಗೆ ಹೋರಾಟ ನಡೆಸುವುದೇ ತಪ್ಪೆ? ಎಂದು ಸ್ಟಾಲಿನ್‌ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!