ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಇದೀಗ ಸದ್ಯಕ್ಕೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಈಗಿನ ನಟಿಮಣಿಯರಿಗೆ ಯಾರ ಜೊತೆ ಡೇಟಿಂಗ್ ಮಾಡೋಕೆ ಇಷ್ಟಪಡುತ್ತೀರಿ ಎಂದು ಕೇಳಿದಾಗ ಸಾಕಷ್ಟು ಮಂದಿ ವಿಜಯ್ ಹೆಸರು ಹೇಳಿದ್ದಾರೆ.
ಇದರಲ್ಲಿ ಜಾಹ್ನವಿ ಕಪೂರ್ ಕೂಡ ಇದ್ದಾರೆ. ವಿಜಯ್ ಜೊತೆ ಡೇಟಿಂಗ್ ಮಾಡೋಕೆ ಇಷ್ಟವಾ ಎನ್ನುವ ಪ್ರಶ್ನೆ ಎದುರಾದಾಗ ನೇರವಾಗಿ ಹೌದು ಎಂದಿದ್ದಾರೆ. ಇದೀಗ ವಿಜಯ್ ಮನೆಯಲ್ಲೇ ಜಾಹ್ನವಿ ಕಾಣಿಸಿದ್ದು, ವಿಜಯ್ ತಾಯಿ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.
ಶೂಟಿಂಗ್ ನಿಮಿತ್ತ ಹೈದರಾಬಾದ್‌ಗೆ ಜಾಹ್ನವಿ ತೆರಳಿದ್ದು, ವಿಜಯ್ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಆದರೆ ಇವರಿಬ್ಬರು ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ? ಕಾದು ನೋಡಬೇಕಿದೆ.