ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಇದೀಗ ಈ ಸಿನಿಮಾಕೊನೆಯ ಸಿನಿಮಾ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರ ಸಹ ಕಲಾವಿದೆ ಮಮಿತಾ ಬೈಜು ಪ್ರಶ್ನೆ ಮಾಡಿದ್ದರು. ಇದಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವಿಜಯ್ ಅವರು ಉತ್ತರ ನೀಡಿದ್ದಾರೆ.
ಈ ಚಿತ್ರದ ಶೂಟಿಂಗ್ ನಡೆದಿದೆ. ಶೂಟ್ ಬಿಡುವಿನ ವೇಳೆ ಅವರು ಮುಂದಿನ ಸಿನಿಮಾ ಯೋಜನೆಗಳ ಬಗ್ಗೆ ವಿಜಯ್ ಬಳಿ ಪ್ರಶ್ನೆ ಮಾಡಿದ್ದಾರೆ. ಆದರೆ, ವಿಜಯ್ ಅವರಿಂದ ಸ್ಪಷ್ಟ ಉತ್ತರ ಬಂದಿಲ್ಲ ಎನ್ನಲಾಗಿದೆ.
ವಿಜಯ್ ಅವರಿಗೆ ಹೀರೋ ಆಗಿ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ನಿಜ. ಆದರೆ, ಅದೆಲ್ಲವೂ ವೋಟ್ ಆಗಿ ಬದಲಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ, ರಾಜಕೀಯದಲ್ಲಿ ಅವರು ಯಶಸ್ಸು ಕಾಣಬಹುದು ಅಥವಾ ಕಾಣದೇ ಇರಬಹುದು.
ಇತ್ತ 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಅವರು ಪಕ್ಷವನ್ನು ಬಲಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ಫಲಿತಾಂಶದ ಮೇಲೆ ವಿಜಯ್ ಸಿನಿ ಬದುಕು ನಿರ್ಧಾರ ಆಗುತ್ತದೆ ಎನ್ನಲಾಗಿದೆ.