ಹೊಸದಿಗಂತ ಡಿಜಿಟಲ್ ಡೆಸ್ಕ್:
2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ ಹಲವು ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿ ಶುರು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು? ರಣತಂತ್ರ ಹೇಗಿರಬೇಕು? ಎಂಬ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.
ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ, ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಕೇಳಿಬರ್ತಿದೆ. ಇದರ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕೀಯಕ್ಕೆ ರಿಟರ್ನ್ ಆಗ್ತಾರೆ ಅನ್ನೋ ದೊಡ್ಡ ಸುಳಿವು ಕೂಡ ಸಿಕ್ಕಿದೆ.
ಇದನ್ನೂ ಓದಿ: ಬಿಸಿ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದ್ರೆ ಈ ಅದ್ಭುತ ಬದಲಾವಣೆಗಳಿಗೆ ಸಿದ್ಧರಾಗಿ!
ʻಟಾಕ್ಸಿಕ್ʼ ಸಿನಿಮಾ ಟೀಸರ್ ಮಾದರಿಯಲ್ಲೇ ಹೆಚ್‌ಡಿಕೆ ಕುರಿತು ಅಭಿಮಾನಿಗಳು ʻಡ್ಯಾಡಿ ಈಸ್ ಹೋಮ್ʼ ಎಐ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣ ಎಂಟ್ರಿಯ ಸುಳಿವು ಕೊಟ್ಟಿದ್ದು, ಹೊಸ ದಾಳ ಉರುಳಿಸಿದ್ದಾರೆ. ಹಾಗಿದ್ರೆ ಕುಮಾರಸ್ವಾಮಿ 2027ರ ವರ್ಷಾರಂಭದಲ್ಲಿ ಬರ್ತಾರಾ? ಅಥವಾ 2026ರಲ್ಲೇ ರಾಜ್ಯ ರಾಜಕೀಯ ಪ್ರವೇಶ ಮಾಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.

