ಸಂಜೆ ಟೀ ಟೈಮ್‌ಗೆ ರುಚಿಯಾದ ಲೈಟ್ ಬ್ರೆಡ್ ಬೇಕಾ? ಹಾಗಿದ್ರೆ ಈ ಬನಾನಾ ಬ್ರೆಡ್ ಟ್ರೈ ಮಾಡಿ! ಈ ರೆಸಿಪಿಯಲ್ಲೇನು ವಿಶೇಷ ಅಂದ್ರೆ – ಇದು ಮೊಟ್ಟೆ ಇಲ್ಲದೆ ತಯಾರಾಗುತ್ತದೆ. ತಾಜಾ, ಮೃದುವಾದ ಈ ಬ್ರೆಡ್ ಮನೆಯಲ್ಲೇ ತಯಾರಿಸಿ, ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
3 ಬಾಳೆಹಣ್ಣುಗಳು
¾ ಕಪ್ ಸಕ್ಕರೆ
½ ಕಪ್ ಎಣ್ಣೆ ಅಥವಾ ಬೆಣ್ಣೆ
1 ಟೀಸ್ಪೂನ್ ವೆನಿಲ್ಲಾ ಸಾರ
¾ ಕಪ್ ಮೈದಾ
¾ ಕಪ್ ಗೋಧಿ ಹಿಟ್ಟು
1 ಟೀಸ್ಪೂನ್ ಬೇಕಿಂಗ್ ಪೌಡರ್
1 ಟೀಸ್ಪೂನ್ ಅಡಿಗೆ ಸೋಡಾ
¼ ಟೀಸ್ಪೂನ್ ದಾಲ್ಚಿನ್ನಿ ಪುಡಿ
ಉಪ್ಪು ಚಿಟಿಕೆ
½ ಕಪ್ ವಾಲ್ನಟ್
ಮಾಡುವ ವಿಧಾನ:
ಮೊದಲಿಗೆ ಬಾಳೆಹಣ್ಣುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಇದಕ್ಕೆ ಸಕ್ಕರೆ ಸೇರಿಸಿ ಬಾಳೆಹಣ್ಣನ್ನು ಮ್ಯಾಶ್ ಮಾಡಿ. ಬೆಣ್ಣೆ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ. ಜೊತೆಗೆ ಮೈದಾ, ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಅಡಿಗೆ ಸೋಡಾ, ದಾಲ್ಚಿನ್ನಿ ಪುಡಿ ಮತ್ತು ಉಪ್ಪನ್ನು ಸೇರಿಸಿ. ಎಲ್ಲಾ ಒಣ ಪದಾರ್ಥಗಳನ್ನು ಬಾಳೆಹಣ್ಣಿನ ಪ್ಯೂರಿಯೊಂದಿಗೆ ಮಿಶ್ರಣ ಮಾಡಿ. ಈಗ ವಾಲ್ನಟ್ ಸೇರಿಸಿ ಮತ್ತು ನಿಧಾನವಾಗಿ ಬೆರೆಸಿ.
ಕೇಕ್ ಬ್ಯಾಟರ್ ಅನ್ನು ಕೇಕ್ ಅಚ್ಚು ಅಥವಾ ಬ್ರೆಡ್ ಅಚ್ಚಿಗೆ ಹಾಕಿ,180 ಡಿಗ್ರಿ ಸೆಲ್ಸಿಯಸ್ ಅಥವಾ 356 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ 40 ನಿಮಿಷಗಳ ಕಾಲ ಬೇಯಿಸಿದರೆ ಬನಾನಾ ಬ್ರೆಡ್ ರೆಡಿ.