ಮಾವು ನೈಸರ್ಗಿಕವಾಗಿ ಹಣ್ಣಾಗಿದ್ಯಾ ಅಥವಾ ಅದನ್ನು ಕೃತಕವಾಗಿ ಕೆಮಿಕಲ್ಸ್ ಹಾಕಿ ಹಣ್ಣು ಮಾಡಿದ್ದಾರಾ? ಇದನ್ನು ತಿಳಿಯೋಕೆ ಇಲ್ಲಿದೆ ಬೆಸ್ಟ್ ಟಿಪ್ಸ್..
ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಏಕರೂಪದ ಬಣ್ಣವನ್ನು ಹೊಂದಿರುತ್ತವೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳಿಗಿಂತ ಹೆಚ್ಚು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಬಹುದು. ಅಂತಹ ಕೃತಕ ಮಾವಿನಹಣ್ಣುಗಳು ಸ್ವಲ್ಪ ಹೊಳೆಯುವಂತೆ ಕಾಣಿಸುತ್ತದೆ.
ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಸಿಹಿ, ಹಣ್ಣಿನ ಸುವಾಸನೆಯನ್ನು ಹೊಂದಿರುತ್ತವೆ. ಆದರೆ, ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಕೆಲವು ರಾಸಾಯನಿಕಗಳನ್ನು ಅಥವಾ ಬೇರೆ ವಾಸನೆಯನ್ನು ಹೊಂದಿರುತ್ತವೆ.
ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳಿಗೆ ಹೋಲಿಸಿದರೆ ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಮೃದುವಾಗಿ ಅಥವಾ ಮೆತ್ತಗೆ ಕಾಣಿಸಬಹುದು. ಏಕೆಂದರೆ ಹಣ್ಣಾಗುವ ಪ್ರಕ್ರಿಯೆಯಲ್ಲಿ ಬಳಸುವ ರಾಸಾಯನಿಕಗಳು ಹಣ್ಣುಗಳ ಜೀವಕೋಶಗಳನ್ನು ಒಡೆಯಬಹುದು, ಇದರಿಂದಾಗಿ ಅವು ಮೃದುವಾಗುತ್ತವೆ.
ಮಾವಿನಹಣ್ಣಿಗೆ ರಾಸಾಯನಿಕಗಳ ಇಂಜೆಕ್ಷನ್‌ನಿಂದ ಅಥವಾ ಕಲೆಗಳಂತಹ ಬಾಹ್ಯ ಹಾನಿಯಾಗಿದ್ದರೆ, ಅವುಗಳನ್ನು ಸೇವಿಸಬೇಡಿ. ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಅಂತಹ ಬಾಹ್ಯ ಕಲೆಗಳನ್ನು ಹೊಂದಿರುವ ಸಾಧ್ಯತೆ ಕಡಿಮೆ.
ಕೃತಕವಾಗಿ ಹಣ್ಣಾಗಿಸಿದ ಮಾವಿನಹಣ್ಣುಗಳು ಸಪ್ಪೆ ಅಥವಾ ವಿಚಿತ್ರ ರುಚಿಯನ್ನು ಹೊಂದಿರಬಹುದು. ಮಾವಿನ ರುಚಿಯು ಕೆಟ್ಟದಾಗಿದ್ದರೆ, ಅಹಿತಕರವಾದ ರುಚಿ ಹೊಂದಿದ್ದರೆ, ಅದನ್ನು ಕೃತಕವಾಗಿ ಹಣ್ಣಾಗಿಸಿರಬಹುದು.